ಅಡುಮರೋಳಿಯಲ್ಲಿ ದೈವದ ಪವಾಡವೋ, ಕಳ್ಳನ ಪ್ರಾಮಾಣಿಕತನವೋ, 92 ಪವನ್ ಚಿನ್ನ ವಾಪಾಸ್ ಬಂತು

Thursday, September 21st, 2017
gold

ಮಂಗಳೂರು : ಅಡುಮರೋಳಿಯಲ್ಲಿ  ದೈವದ ಪವಾಡವೋ, ಕಳ್ಳನ ಪ್ರಾಮಾಣಿಕತನವೋ ಗೊತ್ತಿಲ್ಲ ಕದ್ದ ವಸ್ತುಗಳನ್ನು ಬೇರೆಯವರು ಕಳ್ಳರಿಂದ ಬಿಡಿಸಿಕೊಂಡು ಬಂದು ಮನೆಯೆದುರು ಎಸೆದುಹೋದ ಘಟನೆ ನಡೆದಿದೆ. ಸೆ. 16ರಂದು ಹಾಡಹಗಲೇ ಅಡುಮರೋಳಿ ಸಮೀಪದ ಮನೆಯೊಂದಕ್ಕೆ ನುಗ್ಗಿದ ಕಳ್ಳರು 92 ಪವನ್ ಚಿನ್ನ ಮತ್ತು 12ಸಾವಿರ ರೂ. ನಗದು ಕದ್ದಿದ್ದರು. ಮನೆ ಮಾಲೀಕ ಶೇಖರ್ ಕುಂದರ್ ಹೊರಗಡೆ ಹೋಗಿದ್ದರೆ, ಅವರ ಪತ್ನಿ ಉದ್ಯೋಗಕ್ಕೆಂದು ತೆರಳಿದ್ದರು. ಘಟನೆ ನಡೆದು ಎರಡು ದಿನಗಳಾದ ಮೇಲೆ ಅಂದರೆ ಸೋಮವಾರ ಬೈಕ್‌‌ನಲ್ಲಿದ್ದ ಇಬ್ಬರು ಮನೆ ಮುಂದೆ ವಾಹನ […]

ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಪೊಲೀಸರ ನಡೆ ಖಂಡನೀಯ- ವೇದವ್ಯಾಸ್ ಕಾಮತ್

Friday, September 8th, 2017
vedavyas kamath

ಮಂಗಳೂರು : ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಾರತೀಯ ಜನತಾ ಪಾರ‍್ಟಿಯ ಕಾರ‍್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಕೂಡ ನಡೆದಿದೆ. ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರ‍್ಯಕರ್ತರನ್ನು ಭೇಟಿಯಾಗಿ ವೇದವ್ಯಾಸ ಕಾಮತ್ ಆರೋಗ್ಯ ವಿಚಾರಿಸಿದರು. ವೆನ್ ಲಾಕ್ ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಡನೆ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ್ ಕಾಮತ್, ಪೊಲೀಸರು ಲಾಠಿ ಜಾರ್ಜ್ ಮಾಡುವ ಅಗತ್ಯವೇ ಇರಲಿಲ್ಲ. ಪೊಲೀಸರ ಈ ಕೃತ್ಯದಿಂದ ಐದು ಜನ ಕಾರ‍್ಯಕರ್ತರು […]

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರಾಗಿ ಎ.ಸಿ. ಭಂಡಾರಿ ಅಧಿಕಾರ ಸ್ವೀಕಾರ

Sunday, August 20th, 2017
AC Bhandary

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 9ನೆ ಅವಧಿಯ ಅಧ್ಯಕ್ಷ ಎ.ಸಿ. ಭಂಡಾರಿ ಮತ್ತು ಸದಸ್ಯರು  ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಪ್ರೊ. ಬಿ.ಎ.ವಿವೇಕ ರೈ, ತುಳು ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಸಲುವಾಗಿ ಮತ್ತು ಭಾಷೆಯ ಬೆಳವಣಿಗೆಗೆ ಸಾಫ್ಟ್‌ವೇರ್ ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು. ಅಂತರ್ಜಾಲದಲ್ಲೂ ಕೂಡ ತುಳು ಭಾಷೆಗಾಗಿ ಕೆಲಸ ಕಾರ್ಯ ನಡೆಯುತ್ತಿದೆ. ತುಳು ವಿಕಿಪೀಡಿಯಾ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಕಾಡಮಿಯು ನಾಟಕ, ಸಿನೆಮಾ, ಸಾಂಸ್ಕೃತಿಕ, ಅನುವಾದ, […]

‘ಕಲಾಯಿ ಅಶ್ರಫ್’ ಹತ್ಯೆಗೆ ಪ್ರತೀಕಾರವಾಗಿ ಶರತ್ ಮಡಿವಾಳರವರನ್ನು ಹತ್ಯೆ, ಇಬ್ಬರು ಆರೋಪಿಗಳ ಬಂಧನ

Tuesday, August 15th, 2017
IGP Harishekaran

ಮಂಗಳೂರು  : ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ 43 ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಜಿಪ ಮುನ್ನೂರು ಗ್ರಾಮದ ಹಾಲಾಡಿ ನಿವಾಸಿ  ಅಬ್ದುಲ್ ಶಾಫಿ (36), ಚಾಮರಾಜ ನಗರದ ಗಾಳಿಪುರ ಗ್ರಾಮದ ಖಲೀಲುಲ್ಲಾ (30) ಎಂದು ಗುರುತಿಸಲಾಗಿದೆ. ಸಜಿಪಮೂಡ ಗ್ರಾಮದ ಕಂದೂರು ನಿವಾಸಿಯಾಗಿದ್ದ ಶರತ್ ಮಡಿವಾಳ ಮೇಲೆ ಜು.4ರಂದು ಮಾರಣಾಂತಿಕ ದಾಳಿ ನಡೆದಿತ್ತು. ಅಂದು ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಬಿ.ಸಿ.ರೋಡ್‌‌ನಲ್ಲಿರುವ ಉದಯ ಲಾಂಡ್ರಿಯಲ್ಲಿದ್ದ ವೇಳೆ […]

ವೈಯಕ್ತಿಕವಾಗಿ ಹಾಗೂ ಸಂಸ್ಥೆಯ ತೇಜೋವಧೆ ಮಾಡುತ್ತಿರುವುದು ಸರ್ವತಾ ಅನಪೇಕ್ಷಣಿಯ : ಕಾರ್ಣಿಕ್

Wednesday, August 2nd, 2017
Ganesh Karnik

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ ಜುಲೈ 20 ರಂದು ನಡೆದ ಅತ್ಯಂತ ದುರಾದೃಷ್ಟಕರ ಘಟನೆಯ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಿ ಕಾವ್ಯ ಅತ್ಯಂತ ಪ್ರತಿಭಾನ್ವಿತ ಕ್ರೀಡಾ ಪಟುವಾಗಿ ರೂಪುಗೊಳ್ಳುತ್ತಿರುವ ಎಳೆ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿರುವುದು ಅತ್ಯಂತ ಖೇದಕರ. ಆಕೆಯ ಅಗಲುವಿಕೆಗೆ ಸಂತಾಪವನ್ನು ವ್ಯಕ್ತಪಡಿಸುತ್ತಾ ನೊಂದು ಬೆಂದಿರುವ ಹೆತ್ತವರಿಗೆ ಸಾಂತ್ವನ ಹೇಳುವುದರೊಂದಿಗೆ ಅಗಲುವಿಕೆಯ […]

ಪುತ್ತೂರು ಫಾರೆಸ್ಟ್ ಗಾರ್ಡ್ ಎಸಿಬಿ ಬಲೆಗೆ

Tuesday, July 18th, 2017
Forest Guard

ಪುತ್ತೂರು : ಮರ ಸಾಗಿಸಲು ಲಂಚ ಸ್ವೀಕರಿಸುತ್ತಿದ್ದಾಗ ಪುತ್ತೂರು ಫಾರೆಸ್ಟ್ ಗಾರ್ಡ್ ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಕ್ಯಾತಲಿಂಗಯ್ಯ ಎಂಬುವರು ಎಸಿಬಿ ಬಲೆಗೆ ಬಿದ್ದ ಫಾರೆಸ್ಟ್ ಗಾರ್ಡ್. ಇವರು ಇಬ್ರಾಹಿಂ ಎಂಬುವರಿಂದ 1,500 ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೊಲ್ತಿಗೆಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆದಿದೆ. ಎಸ್ಪಿ ಶೃತಿ ನೇತೃತ್ವದಲ್ಲಿ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್‌‌‌ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ಮತ್ತು ತಂಡ ಕಾರ್ಯಾಚರಣೆ ನಡೆಸಿತ್ತು.

ಶರತ್ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಮುಖ್ಯಮಂತ್ರಿಗಳು ಕಾಂಗ್ರೆಸ್ ಸಮಾವೇಶ ಮಾಡುತ್ತಾರೆ : ಕರಂದ್ಲಾಜೆ

Thursday, July 13th, 2017
BJP Mahila Morcha

ಮಂಗಳೂರು :ಶರತ್ ಗುರುವಾರ ಮಧ್ಯರಾತ್ರಿಯೆ ಮೃತಪಟ್ಟಿದ್ದಾರೆ ಎಂದು ಗೊತ್ತಿದ್ದೂ ಮುಖ್ಯಮಂತ್ರಿಗಳು ಮಂಗಳೂರಲ್ಲಿ ಕಾರ್ಯಕರ್ತರ ಸಮಾವೇಶ ಮಾಡಿ ಸಂಭ್ರಮ ಆಚರಿಸಿದ್ದಾರೆ. ಮುಖ್ಯಮಂತ್ರಿ ಹೋಗುವವರೆಗೆ ಶರತ್ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಕಾಂಗ್ರೆಸ್ ನಾಯಕರು ಸಮಾವೇಶ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಷಾದ ವ್ಯಕ್ತ ಪಡಿಸಿದರು. ದ.ಕ. ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು , ಒಂದು ವೇಳೆ ಪ್ರಭಾಕರ ಭಟ್  ಅವರನ್ನು  ಮುಟ್ಟಿದ್ದೇ ಆದಲ್ಲಿ, ಅದು ಕಾಂಗ್ರೆಸ್ ಶವ ಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ […]

ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ : ಮುನೀರ್

Friday, July 7th, 2017
muneer

ಮಂಗಳೂರು : ಸೌಹಾರ್ದತೆ, ಐಕ್ಯತೆ, ಜ್ಯಾತೀತತೆ ವ್ಯವಸ್ಥೆಯನ್ನು ದುರ್ಭಲಗೊಳಿಸುವ ಶಕ್ತಿಗಳ ವಿರುದ್ಧ  ಡಿವೈಎಫ್‌ಐ ವತಿಯಿಂದ ಹಮ್ಮಿಕೊಂಡಿರುವ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ  ದಲಿತರ, ಅಲ್ಪ ಸಂಖ್ಯಾತರ ಜನರ ಮೇಲೆ ಆಳುವ ಶಕ್ತಿಗಳ ಪ್ರಾಯೋಜಕತ್ವದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನವನುದ್ದೇಶಿಸಿ ಮಾತನಾಡಿ ದೇಶದೊಳಗೆ ದ್ವೇಷದ ವಾತವರಣ ಸೃಷ್ಟಿಯಾಗುತ್ತಿರುವ ಕಾರಣ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜನ ಸಾಮನ್ಯರಲ್ಲಿ, ಅಲ್ಪಸಂಖ್ಯಾತರಲ್ಲಿ, […]

ರಸ್ತೆ ಅಗಲೀಕರಣಕ್ಕಾಗಿ ಮನೆ ಕಳಕೊಂಡವರಿಗೆ ಪಾಲಿಕೆ ವತಿಯಿಂದ ಮನೆ ಹಸ್ತಾಂತರ

Wednesday, July 5th, 2017
Mcc House

ಮಂಗಳೂರು: ಸೂರ್ಯನಾರಾಯಣ ದೇವಸ್ಥಾನದ 37 ನೇ ವಾರ್ಡ್ ನಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮನೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಮನೆಯನ್ನು ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆ ಹಸ್ತಾಂತರಿಸಿತು. ಶಾಸಕ ಜೆ.ಆರ್.ಲೋಬೊ ಅವರ ವಿಶೇಷ ಶಿಫಾರಸು ಮೇರೆಗೆ ಕಲ್ಯಾಣಿ ಅವರಿಗೆ 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಪಾಲಿಕೆ ಮನೆ ನಿರ್ಮಿಸಿ ಕೊಟ್ಟಿತು. ನೂತನ ಮನೆಯ ಕೀಲಿ ಕೈಯನ್ನು ಕಲ್ಯಾಣಿ ಅವರಿಗೆ ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ನಗರಪಾಲಿಕೆ […]

ನಗರದಲ್ಲಿ ಜುಲೈ 7 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Monday, July 3rd, 2017
Rai

ಮಂಗಳೂರು : ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಜುಲೈ 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂಬ ಉದ್ದೇಶದಿಂದ ಜು.7ರಂದು ಅಪರಾಹ್ನ 3 ಗಂಟೆಗೆ ಅಡ್ಯಾರ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವರು ಎಂದವರು ಹೇಳಿದ್ದಾರೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, […]