ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಬಿ .ಸಿ .ರೋಡ್ ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ

Saturday, July 1st, 2017
Bantwal Rikshwa

ಬಂಟ್ವಾಳ : ಹೊಂಡ-ಗುಂಡಿಗಳಿಂದ ಆವೃತವಾಗಿ, ಸಂಪೂರ್ಣ ಹದಗೆಟ್ಟಿರುವ ಬಿ .ಸಿ . ರೋಡ್ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಬಿ .ಸಿ . ರೋಡ್ ರಿಕ್ಷಾ ಚಾಲಕ-ಮಾಲಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು. 8 ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು,ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಸಂಸದರು, ಜಿಲ್ಲಾ ಡಳಿತ, ರಾಷ್ಟ್ರೀಯ ಹೆzರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ […]

ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ ಟಿ. ಶ್ಯಾಮ್ ಭಟ್

Wednesday, June 21st, 2017
yoga

ಉಜಿರೆ: ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ. ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶ್ರದ್ಧೆಯಿಂದ ನಿತ್ಯವೂ ಯೋಗಾಭ್ಯಾಸ ಮಾಡಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಆಯೋಜಿಸಲಾದ ಮೂರನೇ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು. ಉತ್ತಮ ಜ್ಞಾನ, ಪ್ರೀತಿ-ವಿಶ್ವಾಸ ಮತ್ತು ನಿಸ್ಪೃಹ ಸೇವಾ ಮನೋಭಾವ ಹೊಂದಿದವರು ಪರಿಶುದ್ಧರಾಗುತ್ತಾರೆ. ಇಂದು ಆಧುನಿಕ ಜೀವನ ಶೈಲಿ, ಆಹಾರ […]

ಸನಾತನ ನಾಟ್ಯಾಲಯದಲ್ಲಿ ಮುಂಗಾರು ರಂಗ ಸಿರಿ ಸರಣಿ

Tuesday, June 20th, 2017
sanatana natyalaya

ಮಂಗಳೂರು: ರಂಗ ಸ್ಪಂದನ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮುಂಗಾರು ರಂಗಸಿರಿ ಸರಣಿ ಕಾರ್ಯಕ್ರಮದ ಉದ್ಘಾಟನೆಯು ನಗರದ ಸನಾತನ ನಾಟ್ಯಾಲಯದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸನಾತನ ನಾಟ್ಯಾಲಯದ ನೃತ್ಯ ಗುರು ಶಾರದಾಮಣಿ ಶೇಖರ್ ಮಾತನಾಡಿ, ಪ್ರಕೃತಿ ಮತ್ತು ಕಲೆಗೆ ಅವಿನಾಭಾವ ಸಂಬಂಧವಿದೆ. ಆದ್ದ ರಿಂದ ಮಳೆಗಾಲದಲ್ಲಿ ಹಮ್ಮಿಕೊಂಡಿ ರುವ ಈ ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಿಂದ ಕಲಾಸಕ್ತರಿಗೆ ಮನರಂಜನೆ ದೊರೆ ಯುಂತಾಗಲಿ ಎಂದು ಹಾರೈಸಿದರು. ಮಾನವ ಹಕ್ಕು ಹೋರಾಟಗಾರ ಕೊಲ್ಲಾಡಿ ಬಾಲಕೃಷ್ಣ ರೈ […]

ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ಐವನ್ ಚಾಲನೆ

Thursday, April 27th, 2017
Ivan D Souza

ಮಂಗಳೂರು : ಮೂರು ದಿನದ  ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ನಗರದ ಅಕ್ಷರ ಸದನ ಅಂಗನವಾಡಿ ಕೇಂದ್ರ, ಬೋಳೂರು, ಸುಲ್ತಾನ್ ಬತ್ತೇರಿ ಬಳಿ  ಗುರುವಾರ  ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೊಲ್ಲಾಡಿ ಬಾಲಕೃಷ್ಣ ರೈ, ಚಂದ್ರಹಾಸ ಕರ್ಕೇರ, ಕುಮುದಾಕ್ಷಿ, ಯಶವಂತಿ ಮೆಂಡನ್, ಗಣೇಶ್ ಪೂಜಾರಿ ಬಲ್ಲಾಳ್‌ಬಾಗ್, ಚಂದ್ರಶೇಖರ್ ಗಟ್ಟಿ ಬೋಳೂರು, ಎನ್.ಪಿ. ಮನುರಾಜ್, ಸತೀಶ್ ಪೆಂಗಲ್, ಹಬೀಬುಲ್ಲ ಕಣ್ಣೂರು, ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್, ಶಶಿಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ನಾಗೇಂದ್ರ […]

ಅಡುಗೆ ಅನಿಲ ದರ ಏರಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Friday, March 17th, 2017
Mahila congress

ಮಂಗಳೂರು:  ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಏರಿಸಿರುವುದರ ವಿರುದ್ಧ ರಸ್ತೆಯಲ್ಲಿಯೇ ಒಲೆ ಉರಿಸಿ, ಹಾಲು ಕುದಿಸಿ ಚಹಾ ಮಾಡಿ ಕುಡಿಯುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. `ಅಚ್ಚೇ ದಿನ್’ ಅಂದವರಿಂದಲೇ ಈಗ `ಕೆಟ್ಟ ದಿನ’ ಬರುತ್ತಿವೆ. ಅಡುಗೆ ಅನಿಲ ದರ ಸೇರಿದಂತೆ ಜನ ಬಳಕೆಯ ವಸ್ತುಗಳ ಬೆಲೆ ವಿಪರೀತವಾಗಿ ಏರುತ್ತಿದೆ. ಜನ ಸಾಮಾನ್ಯರ […]

ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸಂತಾಪ ಸಭೆ

Wednesday, January 4th, 2017
Mahadeva prasad

ಮಂಗಳೂರು : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯದ ಸಹಕಾರಿ ಮತ್ತು ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಅವರ ನಿಧನಕ್ಕೆ  ಮಂಗಳವಾರ ಸಂತಾಪ ಸಭೆ ನಡೆಯಿತು . ಅರಣ್ಯ,ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಸಹಕಾರಿ ರಂಗದ ರೈತರ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಸ್ಪಂದಿಸುತ್ತಿದ್ದ ಮಹಾದೇವ ಪ್ರಸಾದ್   ಜನಾನುರಾಗಿಯಾಗಿದ್ದರು . ಅವರ ನಿಧನ ಪಕ್ಷಕ್ಕೆ ಹಾಗೂ ರಾಜ್ಯದ ಜನತೆಗೆ ಅಪಾರ ನಷ್ಟ ವನ್ನುಂಟು ಮಾಡಿದೆ ಎಂದು  ಸಂತಾಪ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರೈತರ ಸಮಸ್ಯೆಗಳ ಬಗ್ಗೆ […]

ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ: ಜನಾರ್ದನ ಪೂಜಾರಿ

Thursday, December 29th, 2016
Janardana Poojary

ಮಂಗಳೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತವೆಂದು ಕಾಂಗ್ರೆಸ್‌ನವರೇ ಆದ ಜನಾರ್ದನ ಪೂಜಾರಿ ಪಕ್ಷದ ವಿರುದ್ಧವೇ ಭವಿಷ್ಯ ನುಡಿದಿದ್ದಾರೆ. ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್‌‌ನಿಂದ ಎಷ್ಟೇ ಒಳ್ಳೆಯ ಅಭ್ಯರ್ಥಿ ಹಾಕಿದರು ಪಕ್ಷ ಸೋಲುತ್ತದೆ. ಶ್ರೀನಿವಾಸ್ ಪ್ರಸಾದ್ ಪಕ್ಷದ ಮಾನ ಹರಾಜು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಈಗಲಾದರು ಎಚ್ಚೆತ್ತುಕೊಳ್ಳಿ. ಜನರಿಂದ, ಕಾರ್ಯಕರ್ತರಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ. ಕಾಂಗ್ರೆಸ್‌ನಲ್ಲಿ ಗೊಂದಲ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಧೂಳಿಪಟವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. ನನಗೆ […]

ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು: ಜಗದೀಶ್ ಕಾರಂತ್

Monday, November 28th, 2016
Hindu samavesha

ಮಂಗಳೂರು: ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ಎದುರಿಸುವುದೂ ಅಲ್ಲ ಬದಲಾಗಿ ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು. ಹಿಂದೂ ಜಾಗರಣ ವೇದಿಕೆಯ ಶಕ್ತಿನಗರ ವಲಯ ಮತ್ತು ಕಣ್ಣೂರು ನಗರ ಘಟಕಗಳ ಉದ್ಘಾಟನಾ ಪ್ರಯುಕ್ತ ಶಕ್ತಿನಗರದ ಕೇಂದ್ರ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆ ಸಮಾವೇಶ ಎಂದರೆ ಸಮಸ್ಯೆಗಳ ವೈಭವೀಕರಣ ಬಿಟ್ಟು ಉತ್ತರ ಕಂಡುಕೊಳ್ಳುವಂತಾಗಬೇಕು. ಸಾಮಾಜಿಕ ಪಿಡುಗುಗಳಿಗೆ ಪರಿಹಾರ […]

ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆ

Friday, October 7th, 2016
rithik

ಮಂಗಳೂರು: ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವಿದ್ಯಾರ್ಥಿ ಬೆಂಗಳೂರು ಮಾರ್ತಳ್ಳಿ ನಿವಾಸಿ ಭಾಸ್ಕರ್ ಎಂಬುವರ ಪುತ್ರ ರಿತಿಕ್(17)ಎಂದು ತಿಳಿದುಬಂದಿದೆ. ಈತ ಪುತ್ತಿಗೆಯ ಸಹ್ಯಾದ್ರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ರಿತಿಕ್ ಬುಧವಾರ ಕಾಣೆಯಾಗಿದ್ದು, ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬಾಲಣ್ಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿತಿಕ್ ಹಾಸ್ಟೆಲ್‌ನಿಂದ ಹೊರಡುವ ಮುನ್ನ ಆಕಾಶ ನೀಲಿಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ದೃಢಕಾಯ ಶರೀರದ ರಿತಿಕ್‌ […]

ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆ

Friday, September 16th, 2016
kumbale

ಕುಂಬಳೆ: ನಾಡಿನ ಸಾಂಪ್ರದಾಯಿಕ ಕಲೆಯಾದ ಗಮಕ ಪ್ರಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮೂಹ ಸ್ವ ಆಸಕ್ತಿಯಿಂದ ಮಾಡಬೇಕು. ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆಯೆಂದು ಖ್ಯಾತ ಕಲಾವಿದ ಎಸ್ ಎನ್ ಪಂಜಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹವ್ಯಕ ಭವನದಲ್ಲಿ ಇತ್ತೀಚೆಗೆ ನಡೆದ ೩ ದಿನಗಳ ಗಮಕ ಕಲಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಗಮಕ […]