ಪೇಟಾ ವಿರುದ್ಧ ಮಾನವ ಸರಪಳಿ ರಚಿಸಿ ಹೋರಾಟಕ್ಕಿಳಿದ ತುಳುನಾಡಿನ ಜನತೆ

12:14 AM, Saturday, January 28th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

kambala ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಉಳಿಸಿ ಹೋರಾಟ ಸಮಿತಿ ಆಯೋಜಿಸಿರುವ  ಕಂಬಳ ಉಳಿವಿಗಾಗಿ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳು, ರಾಜಕಾರಣಿಗಳು, ತುಳು ಸಿನಿ ತಾರೆಗಳು ಮಾನವ ಸರಪಳಿ ರಚಿಸಿ ಬೆಂಬಲ ನೀಡಿದ್ದಾರೆ.

ಶುಕ್ರವಾರ ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರೂಪಿಸಿ ಪ್ರತಿಭಟನೆ ನಡೆಸಿ ಪೇಟಾ ವಿರುದ್ಧ ಘೋಷಣೆ ಕೂಗಿ ಪೇಟಾ ನಿಷೇಧಕ್ಕೆ ಆಗ್ರಹಿಸಿದರು.

kambala ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು,  ಮಾತನಾಡಿ, ಕಂಬಳ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ಕಂಬಳದೊಂದಿಗೆ ತುಳುನಾಡಿನ ಸಂಸ್ಕೃತಿ ಅಡಗಿದೆ. ಕಂಬಳ ಇಲ್ಲದ ತುಳುನಾಡನ್ನು ಊಹಿಸಲು ಸಾಧ್ಯವಿಲ್ಲ. ತಮಿಳುನಾಡಿನ ಜಲ್ಲಿಕಟ್ಟು ಮತ್ತು ಕಂಬಳ ಆಚರಣೆಯ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಕಂಬಳದಲ್ಲಿ ಹಿಂಸೆ ಇಲ್ಲವೇ ಇಲ್ಲ. ಹಾಗಾಗಿ ಕಂಬಳವನ್ನು ಉಳಿಸಲು ಜಾತಿ, ಧರ್ಮವನ್ನು ಮರೆತು ಹೋರಾಟಕ್ಕೆ ಮುಂದಾಗಿದ್ದೇವೆ. ಕಂಬಳದ ವಾಸ್ತವವನ್ನು ಅರಿತು ಸರಕಾರ ಇದನ್ನು ಉಲಿಸಲು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ತುಳು ಚಿತ್ರರಂಗದ ಖ್ಯಾತ ನಟ ನವೀನ್ ಡಿ. ಪಡೀಲ್, ದೇವದಾಸ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್‌‌ಬೈಲ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ ಮಾತನಾಡಿದರು.

kambala ಮಂಗಳೂರು ಉತ್ತರ ಶಾಸಕ ಬಿ.ಎ.ಮೊದಿನ್ ಬಾವ, ಕ್ರೆಡೈ ಮಾಜಿ ಅಧ್ಯಕ್ಷ ಪಷ್ಪರಾಜ್ ಜೈನ್, ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ನಟ, ನಿರ್ದೇಶಕ ಸುಂದರ ರೈ ಮಂದಾರ, ನಟ ಉಮೇಶ್ ಮಿಜಾರ್, ವಕೀಲರ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ, ಎಂ. ಜಿ. ಹೆಗಡೆ, ಪ್ರೊ. ಎಂ. ಬಿ. ಪುರಾಣಿಕ್, ಕಂಬಳ ಸಮಿತಿಯ ಮುಖಂಡ ಅಶೋಕ್ ರೈ, ತುಳುನಾಡುವ ರಕ್ಷಣಾ ವೇದಿಕೆಯ ಸ್ಥಾಪಕ ಯೋಗೀಶ್ ಶೆಟ್ಟಿ ಜೆಪ್ಪು ಜಾದೂಗಾರ ಕುದ್ರೋಳಿ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English