ಮಂಗಳೂರು: ನಂದಿಗುಡ್ಡೆ ಸ್ಮಶಾನವನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಇಂದು ನಂದಿಗುಡ್ಡೆ ಸ್ಮಶಾನ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಹೆಚ್ಚುವರಿಯಾಗಿ 2 ಶವಾಗಾರಕ್ಕೆ ಸಿಲಿಕಾನ್ ಅಳವಡಿಸುವುದು ಹಾಗೂ ಮೂಲಭೂತ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ಕುಡಿಯುವ ನೀರು, ಜನರಿಗೆ ಕುಳಿತುಕೊಳ್ಳಲು ಅವಕಾಶ ಮಾಡಲಾಗುವುದು. ಈ ಕೆಲಸಗಳು 4 ತಿಂಗಳ ಒಳಗೆ ಪೂರ್ಣಗೊಳಿಸಿ ನಂದಿಗುಡ್ಡೆ ಸ್ಮಶಾನವನ್ನು ಆಧುನೀಕರಿಸಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಇದಕ್ಕೂ ಮೊದಲು ಪದವಿನಂಗಡಿ ವೃತ್ತ ಅಭಿವೃದ್ಧಿ 50 ಲಕ್ಷ, ಆಗ್ನೇಸ್ ವೃತ್ತ ವೃತ್ತ ಅಭಿವೃದ್ಧಿ-25 ಲಕ್ಷ, ಸಿಟಿ ಹಾಸ್ಪಿಟಲ್ ವೃತ್ತ ಅಭಿವೃದ್ಧಿ – 15 ಲಕ್ಷ, ಕರಾವಳಿ ವೃತ್ತ ಅಭಿವೃದ್ಧಿ- 60 ಲಕ್ಷ, ವೆಲೆನ್ಸಿಯ ವಾರ್ಡ್ ಕಚೇರಿ ಅಭಿವೃದ್ಧಿ- 45 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಬ್ದುಲ್ ರವೂಫ್, ನಾಗವೇಣಿ, ಸವಿತಾ ಮಿಸ್ಕಿತ್, ಕಾರ್ಪೊರೇಟರ್ ಗಳಾದ ನವೀನ್ ಡಿಸೋಜಾ, ಜೆಸಿಂತ್ ಅಲ್ಫ್ರೆಡ್, ಆಶಾ ಡಿಸಿಲ್ವಾ, ಶೈಲಜಾ, ಅಶೋಕ್ ಕುಮಾರ್ ಡಿ.ಕೆ., ಅಪ್ಪಿ, ದಿವಾಕರ್, ರತಿಕಲಾ, ಕವಿತಾ ವಾಸು, ನಾಗೇಶ್ ಭಂಡಾರಿ, ಆಯುಕ್ತರಾದ ಮಹಮದ್ ನಜೀರ್, ಪಾಲಿಕೆ ಇಂಜಿಯಾರ್ ಲಿಂಗೇಗೌಡ, ಗಣಪತಿ, ಅಶೋಕ್ ಕುಮಾರ್, ರಘುಪಾಲ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English