ರೇಬಿಸ್ ಸೋಂಕು ಹಿನ್ನೆಲೆ ಇಚ್ಲಂಪಾಡಿಗೆ ಭೇಟಿ ನೀಡಿದ ತಜ್ಞ ವೈದ್ಯರ ತಂಡ

Wednesday, September 5th, 2018
rebeese

ಮಂಗಳೂರು: ರೇಬಿಸ್ ಸೋಂಕು ತಗಲಿ ಸಾವಿಗೀಡಾದ ಯುವಕನ ಊರಿನಲ್ಲಿ ಆತಂಕ ಮನೆ ಮಾಡಿದೆ. ಪುತ್ತೂರು ತಾಲೂಕಿನ ಇಚ್ಲಂಪಾಡಿ ಗ್ರಾಮದ 200ಕ್ಕೂ ಅಧಿಕ ಗ್ರಾಮಸ್ಥರು ಇದೀಗ ಆಂಟಿ ರೇಬೀಸ್ ಚುಚ್ಚುಮದ್ದು ಪಡೆದಿದ್ದಾರೆ. ಸೋಮವಾರದಿಂದ ಗ್ರಾಮಸ್ಥರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚುಚ್ಚುಮದ್ದು ಪಡೆಯುತ್ತಿರುವುದು ಮುಂದುವರೆದಿದೆ. ಇಚ್ಲಂಪಾಡಿ ಗ್ರಾಮಕ್ಕೆ ಇಂದು ಮಂಗಳವಾರ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ವೈದ್ಯಕೀಯ ತಜ್ಞರ ತಂಡ ನೆಲ್ಯಾಡಿ ಸರಕಾರಿ ಆಸ್ಪತ್ರೆ ಹಾಗೂ ಮೃತ ಯುವಕನ ಮನೆಗೆ ಭೇಟಿ ನೀಡಿ ಮಾಹಿತಿ […]

ರೇಬಿಸ್​​ನಿಂದ ಯುವಕ‌ ಸಾವು… ಅಂತ್ಯಕ್ರಿಯೆಗೆ ಹೋಗಿದ್ದವರಿಗೆ ಆತಂಕ!

Tuesday, September 4th, 2018
rabees

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಇಚಿಲಂಪಾಡಿ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಆರು ದಿನಗಳ ಹಿಂದೆ ರೇಬಿಸ್ನಿಂದ ಮೃತಪಟ್ಟ ಯುವಕನ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದ ನೂರಾರು ಮಂದಿ‌ ಇದೀಗ ಆತಂಕದಲ್ಲಿದ್ದಾರೆ. ವೈರಾಣು ಹರಡುವಿಕೆಯಿಂದ ಆತಂಕಕ್ಕೊಳಗಾಗಿರುವ ಸ್ಥಳೀಯರು ಇದೀಗ ಆ್ಯಂಟಿ ರೇಬಿಸ್ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿದ್ದಾರೆ‌. ಸುಳ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಇಚ್ಲಂಪಾಡಿಯ ಕಾಯರ್ತಡ್ಕ ನಿವಾಸಿ ಆಶಿತ್ ಪೂಜಾರಿ (24) ಇತ್ತೀಚೆಗೆ ನಿಧನರಾಗಿದ್ದರು. ಹಠಾತ್ ಅನಾರೋಗ್ಯಕ್ಕೀಡಾಗಿ ಆ. 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ […]