ಉಪಲೋಕಾಯುಕ್ತರಿಂದ ಮಂಗಳೂರಿನ ವಿವಿದೆಡೆ ಭೇಟಿ ನೀಡಿ , ಪರಿಶೀಲನೆ

Sunday, December 1st, 2024
lokayukta

ಮಂಗಳೂರು : ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭಾನುವಾರ ಜಿಲ್ಲೆಯ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲು ಮಂಗಳೂರು ಮಹಾನಗರಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕ ಪಚ್ಚನಾಡಿಗೆ ಭೇಟಿ ನೀಡಿದ ಅವರು ಘಟಕದ ಒಳಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ತಪಾಸಣೆ ನಡೆಸಿದರು. ತ್ಯಾಜ್ಯ ನಿರ್ವಹಣೆ, ಪ್ರತ್ಯೇಕಿಸುವಿಕೆಯ ಘಟಕಗಳಿಗೂ ಖುದ್ದು ಹೋಗಿ ವೀಕ್ಷಿಸಿದರು. ತ್ಯಾಜ್ಯ ವಿಲೇವಾರಿಯ ಪ್ರತೀ ಹಂತದ ಮಾಹಿತಿ ಕೇಳಿದ ಅವರು ಘಟಕದ ಕಾರ್ಮಿಕ ರಲ್ಲಿಯೂ ಅಹವಾಲು ಆಲಿಸಿದರು. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕಕ್ಕೂ ಹೋಗಿ […]