ಗೋದಾಮುಗಳಲ್ಲಿ 50 ಕ್ವಿಂಟಾಲ್ ಈರುಳ್ಳಿ ದಾಸ್ತಾನು ಮಿತಿಗೊಳಿಸಿ : ಜಿಲ್ಲಾಧಿಕಾರಿ

Tuesday, December 10th, 2019
irulli

ಮೈಸೂರು : ಮುಕ್ತ ಮಾರುಕಟ್ಟೆಯಲ್ಲಿ ಮತ್ತು ಸಗಟು ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನಿರಿಸುವುದನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು ಸರ್ಕಾರವು ಉಲ್ಲೇಖಿತ ಅಧಿಸೂಚನೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986 ಅಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ಡೀಲರ್ ಗಳಲ್ಲಿ/ಉತ್ಪಾದಕರಲ್ಲಿ/ಕಮಿಷನ್ ಏಜೆಂಟ್ ಗಳಲ್ಲಿ ದಾಸ್ತಾನಿನ ಮಿತಿಯನ್ನು 250ಕ್ವಿಂಟಾಲ್ ಗೆ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 50ಕ್ವಿಂಟಾಲ್ ಗೆ ಮಿತಿಗೊಳಿಸಿ ಆದೇಶಿಸಲಾಗಿದೆ ಎಂದಿದ್ದಾರೆ. […]

ಪುತ್ತೂರುನಲ್ಲಿ ’ಕ್ಯಾಂಪ್ಕೊದ ಬೃಹತ್ ಗೋದಾಮು ನಿರ್ಮಾಣಕ್ಕೆ ಭೂಮಿ ಪೂಜೆ

Tuesday, January 8th, 2019
Campco

ಪುತ್ತೂರು :  ಇಲ್ಲಿನ ಕಾವು ಪ್ರದೇಶದಲ್ಲಿ, ಕ್ಯಾಂಪ್ಕೊ ತನ್ನ ಸ್ವಂತ ನಿವೇಶನದಲ್ಲಿ ಅತ್ಯಾಧುನಿಕವಾದ ಬೃಹತ್ ಗೋದಾಮು ನಿರ್ಮಿಸಲು ಸಂಕಲ್ಪಸಿದ್ದು ಅದರ ಅಂಗವಾಗಿ ಭೂಮಿ ಪೂಜೆ ಕಾರ್ಯ ಮಂಗಳವಾರ  ನೆರವೇರಿತು. 1.31 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು 24.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೃಹತ್ ಗೋದಾಮು ಕಾವಿನಲ್ಲಿ ನಿರ್ಮಾಣಗೊಳಲ್ಲಿದ್ದು, ಅಲ್ಲಿ ಅಡಕೆ, ರಬ್ಬರ್ ಹಾಗೂ ಕಾಳುಮೆಣಸು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಶೇಖರಣೆಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಸುಸಜ್ಜಿತ ಆಧುನಿಕ ವ್ಯವಸ್ಥೆಗಳಿಂದ ಸಂಸ್ಥೆಯ ಕಾರ್ಯಕ್ಷಮತೆ ವೃದ್ಧಿಗೊಂಡು ಸದಸ್ಯರಿಗೆ […]