ಸಿತಾರ್-ಝಿತಾರ್: ಕುಮಾರ್ ಬೆರಳ ಮಾಂತ್ರಿಕತೆಗೆ ಕಿವಿಯಾದ ಶ್ರೋತೃಗಳು
Friday, December 13th, 2024ಮೂಡುಬಿದಿರೆ : ವೈಭವದಿಂದ ಅಲಂಕೃತಗೊಂಡ ಆಳ್ವಾಸ್ ವಿರಾಸತ್ ಸಭಾಂಗಣದ ಮೇಲೆ ಪಶ್ಚಿಮದಿಂದ ಸರ್ಯ ಹೊಂಗಿರಣ ಬೀರಿದರೆ, ಇತ್ತ ಪರ್ವದ ಕೋಲ್ಕತ್ತಾದಿಂದ ಬಂದ ನೀಲಾದ್ರಿ ಕುಮಾರ್ ಸಿತಾರ್-ಝಿತಾರ್ ತರಂಗಗಳ ಕಂಪನದ ಅಲೆ ಸೃಷ್ಟಿಸಿದರು. ದೃಶ್ಯ-ಶ್ರವ್ಯಕ್ಕೆ ಬೆರಗಾದ ಜನತೆ ತಲೆದೂಗಿದರು. ನೀಲಾದ್ರಿಯ ಬೆರಳುಗಳ ಸಂಚಲನದ ಕಂಪನ- ತರಾಂಗಂತರಂಗಕ್ಕೆ ವಿರಾಸತ್ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರವೇ ನಿನಾದಲ್ಲಿ ತುಂಬಿತ್ತು. ತಾವೇ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ವರ್ಣದ ‘ಝಿತಾರ್’ ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ […]