ಕೊರೊನಾ ಸೋಂಕಿತನಿಗೆ ಯುನಿಟಿ ಆಸ್ಪತ್ರೆ ನೀಡಿದ ಬಿಲ್ 2.97,518 ರೂ‌. ಆದರೆ ಪಿಪಿಇ ಕಿಟ್ ಉಚಿತ !

Friday, September 4th, 2020
ppeKit

ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಕೊರೊನಾ ಸೋಂಕಿತರೋರ್ವರಿಗೆ  11 ದಿನಗಳ ಕಾಲ ಚಿಕಿತ್ಸೆ ನೀಡಿ 2.97,518 ರೂ‌. ಬಿಲ್ ನೀಡಿದೆ. ಆದರೆ ಪಿಪಿಇ ಕಿಟ್ ಉಚಿತ  ಎಂದು 45,110 ರೂ‌. ರಿಯಾಯಿತಿ ನೀಡಿದ ಬಿಲ್ ಹಾಕಿ ಮತ್ತೆ ವಿನಾಯಿತಿ ಎಂದು ತೋರಿಸಿದೆ. ಸರ್ಕಾರದ ನಿಯಮವನ್ನೂ ಮೀರಿ ಖಾಸಗಿ ಆಸ್ಪತ್ರೆ ಗಳು ಸೋಂಕಿತರಿಂದ ವಸೂಲಿ ಮಾಡಲು ಇದು ಸುವರ್ಣಾವಕಾಶ ಎಂಬಂತೆ ವರ್ತಿಸಲಾರಂಭಿಸಿದೆ, ದೇಶದಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಉಚಿತ ಚಿಕಿತ್ಸೆ ನೀಡಿ ಸರಕಾರದೊಂದಿಗೆ ಕೈಜೋಡಿಸಬೇಕಾದ ಖಾಸಗಿ ಆಸ್ಪತ್ರೆಗಳು, ಇದೆ ಸದಾವಕಾಶ ಎಂದು ರೋಗಿಗಳಿಂದ ದೋಚಲು ಆರಂಭಿಸಿದೆ. ಸರ್ಕಾರದ ನಿಯಮದಂತೆ ಕೊರೊನಾ ಸೋಂಕಿತರಿಗೆ […]

ಕೋವಿದ್ ಇದೆ ಎಂದು ಸುಳ್ಳು ವರದಿ ನೀಡಿ 89 ಸಾವಿರ ಬಿಲ್! ಕರ್ ಕೊಂಡು ಹೋದವರಿಗೂ 21 ಸಾವಿರ ಬಿಲ್ ವಸೂಲಿ ಮಾಡಿದ ಮಂಗಳೂರಿನ ಆಸ್ಪತ್ರೆ

Tuesday, July 28th, 2020
dinesh adkar

ಮಂಗಳೂರು : ಎದೆನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಕೊವಿಡ್ ತಪಾಸಣೆ ಮಾಡಿ ನಿಮಗೆ ಪಾಸಿಟೀವ್ ಇದೆ ಎಂದು ವರದಿಕೊಟ್ಟಿದ್ದಾರೆ. ಸಂಶಯಗೊಂಡ ಅವರು ಮರುದಿನ ಬೇರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ನೆಗೆಟೀವ್ ಬಂದಿದೆ. 89 ಸಾವಿರ ಬಿಲ್ಲಿನ ಜೊತೆಗೆ ಅವರನ್ನು ನೋಡಿಕೊಳ್ಳಲು ಬಂದವರಿಗೂ  ಕೋವಿದ್ ತಪಾಸಣೆಯ ನೆಪದಲ್ಲಿ 21 ಸಾವಿರ ಬಿಲ್ ಹಾಕಿದ ಪ್ರಕರಣವೊಂದು ನಡೆದಿದೆ. ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲಕ ದಿನೇಶ್ ಅಡ್ಕಾರ್ ಎಂಬವರು ಜುಲೈ 21 ನೇ ತಾರೀಕಿನಂದು […]

ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪಿಪಿಇ ಕಿಟ್ ತೆರೆದು ಮುಖದರ್ಶನ ಪಡೆದ ಕಾಂಗ್ರೆಸ್ ಮುಖಂಡರು

Monday, July 27th, 2020
ivan

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ,  ಶಾಸಕ ಯು.ಟಿ‌. ಖಾದರ್ ಮತ್ತು ಕೆಲವು  ಕಾಂಗ್ರೆಸ್ ನಾಯಕರು ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಜಾಗಕ್ಕೆ ತೆರೆಳಿ ಮೃತದೇಹದ ಪಿಪಿಇ ಕಿಟ್ ಅನ್ನು ಬಿಚ್ಚಿ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ  ಘಟನೆ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ತೆರಳಿ ಮೃತರ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೃದ್ಧೆ ಜು.24ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಗರದ […]

ಪ್ರತಿಪಕ್ಷಗಳ ಆರೋಪ ನಿರಾಧಾರ -ಆರೋಗ್ಯ ಸಚಿವ ಬಿ.ಶ್ರೀರಾಮುಲು

Monday, July 20th, 2020
sriramulu

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಿಕಿತ್ಸೆಗಾಗಿ ಅಗತ್ಯವಿರುವ ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದ್ದು, ಇಂತಹ ಯಾವುದೇ ಪ್ರಕರಣಗಳು ನಡೆದಿರುವುದಿಲ್ಲ, ಅವ್ಯವಹಾರ ಸಾಭೀತದಾದಲ್ಲಿ ತಕ್ಷಣವೇ ರಾಜಿನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳ ಆರೋಪ ಕುರಿತು ಇಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳು ಕಳೆದ ಮಾರ್ಚ್‍ನಲ್ಲಿ ಇದ್ದ ರಾಜ್ಯದ ಪರಿಸ್ಥಿತಿಯನ್ನು […]

ಎರಡು ತಿಂಗಳ ಮಗುವನ್ನು ಬಲಿ ಪಡೆದ ಕೊರೋನಾ, ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ‌ ಅಂತ್ಯಸಂಸ್ಕಾರ

Saturday, July 18th, 2020
kodimbala

ಮಂಗಳೂರು : ಆ ಪುಟ್ಟ ಮಗುವನ್ನೂ ಬಿಡಲಿಲ್ಲ ಕೊರೋನಾ, ಮಗು ಹುಟ್ಟಿ ಕೇವಲ ಎರಡೇ ತಿಂಗಳು, ಇನ್ನಷ್ಟೇ  ಪ್ರಪಂಚ ನೋಡಬೇಕಿತ್ತು. ಆದರೆ ಆ ಮಗುವಿಗೆ ದೈತ್ಯ  ಕೊರೋನಾ ದ ಜೊತೆ ಹೋರಾಡಲು ಸಾಧ್ಯವಾಗಲೇ ಇಲ್ಲ. ಕೊರೋನಾ ತನ್ನ ಮನೆಯವರನ್ನು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು  ಬಿಡಲಿಲ್ಲ ಕೊನೆಗೆ ಮಗುವಿನ ಅಂತ್ಯಸಂಸ್ಕಾರ ವನ್ನು ಬಜರಂಗದಳದ ಕಾರ್ಯಕರ್ತರು ನಡೆಸಬೇಕಾಯಿತು. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ […]

ರಸ್ತೆ ಪಕ್ಕ ಪಿಪಿಇ ಕಿಟ್‌ : ಸಾರ್ವಜನಿಕರಲ್ಲಿ ಆತಂಕ

Monday, June 29th, 2020
ppe kit

ಹುಬ್ಬಳ್ಳಿ: ಸ್ಥಳೀಯ ರಾಜನಗರದ ಬಳಿಯ ನೃಪತುಂಗ ಬೆಟ್ಟದ ರಸ್ತೆಯಲ್ಲಿ ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವಾಗ ಈ ವಿಶೇಷ ಪಿಪಿಇ ಕಿಟ್ ಧರಿಸಲಾಗುತ್ತದೆ. ರಸ್ತೆ ಬದಿ ಪಿಪಿಇ ಕಿಟ್ ಎಸೆದ ಸಿಬ್ಬಂದಿಯ ಪತ್ತೆಗೆ ಯತ್ನಿಸಲಾಗುತ್ತಿದೆ. ಉಪಯೋಗಿಸಿದ ಬಳಿಕ ಕಿಟ್‍ ಅನ್ನು ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‍ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ […]