ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ನಿರ್ಮಾಣದ ಹೊಂಡಕ್ಕೆ ಕಾರು ಬಿದ್ದು ಐವರಿಗೆ ಗಾಯ
Friday, December 27th, 2024ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಮಗುಚಿಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಬಿದ್ದಿರುವುದು ಮೊದಲ ಅಪಘಾತವಾಗಿದ್ದು ವಾಹನ ಸವಾರರು ಜಾಗರೂಕರಾಗಿರಬೇಕಿದೆ ಎಂದು ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ. ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ಕಾಮಗಾರಿಗೆ ಪರವಿರೋಧ ಚರ್ಚೆಗಳು/ಹೋರಾಟಗಳು ಜೋರಾಗಿ ನಡೆಯುತ್ತಿರುವ […]