ಪೊಲೀಸ್​ ಭದ್ರತೆಯಲ್ಲಿ ಹಬ್ಬಗಳ ಆಚರಣೆ ಮಾಡುವ ಪರಿಸ್ಥಿತಿ ಬದಲಾಗಲಿ: ಡಾ. ಟಿ.ಆರ್.ಸುರೇಶ್

Friday, September 14th, 2018
t-r-suresh

ಮಂಗಳೂರು: ಇಂದು ಎಲ್ಲಾ ಧರ್ಮಗಳ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಮಾಡುವ ಪರಿಸ್ಥಿತಿ ಇದ್ದು, ಇದನ್ನು ಹೋಗಲಾಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಟಿ.ಆರ್.ಸುರೇಶ್ ಕುಮಾರ್ ಹೇಳಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಹಿಂದು ಯುವ ಸೇನೆಯಿಂದ ನಡೆಯುತ್ತಿರುವ 26ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಹಬ್ಬಗಳ ಆಚರಣೆಯಲ್ಲಿ ತೊಡಗಿದ್ದರೆ, ಪೊಲೀಸರು ಭದ್ರತಾ ಕೆಲಸದಲ್ಲಿರುತ್ತಾರೆ. ಇಂದು ಎಲ್ಲಾ ಧರ್ಮಗಳ ಹಬ್ಬಗಳ ಆಚರಣೆಗಳು ಪೊಲೀಸ್ ಬಂದೋಬಸ್ತಿನಲ್ಲಿ ನಡೆಯುತ್ತಿವೆ. ಕಿಡಿಗೇಡಿಗಳು ತಮ್ಮ ವೈಯಕ್ತಿಕ ದ್ವೇಷವನ್ನು […]

ಗುಜರಾತಿನ ಸೂರತ್‌ನಲ್ಲಿ ಕ್ಯಾಂಪ್ಕೊ ಮಾರಾಟ ಕೇಂದ್ರ ಆರಂಭ

Tuesday, May 22nd, 2018
campco

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಕೃಷಿಕರು ಬೆಳೆಯುವ ಅಡಿಕೆ ಉತ್ತರ ಭಾರತದಲ್ಲಿ ಬಹುಬೇಡಿಕೆಯ ವಸ್ತುವಾಗಿದೆ. ವಿಶೇಷವಾಗಿ, ಉತ್ತಮ ಗುಣಮಟ್ಟದ ಚಾಲಿ (ಬಿಳಿ) ಅಡಿಕೆಗೆ ಗುಜರಾತ್ ರಾಜ್ಯ ಯೋಗ್ಯ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜಕೋಟ್ ನಗರಗಳಲ್ಲಿ ಈಗಾಗಲೇ ಮಾರಟ ಕೇಂದ್ರಗಳನ್ನು ಹೊಂದಿರುವ ಕ್ಯಾಂಪ್ಕೊ, ಗ್ರಾಹಕರ ಬೇಡಿಕೆಗನುಸಾರವಾಗಿ ಇದೀಗ ಆ ರಾಜ್ಯದಲ್ಲಿ ಮೂರನೇ ಮಾರಾಟ ಕೇಂದ್ರವನ್ನು ಸೂರತ್ ನಗರದಲ್ಲಿ ಆರಂಭಿಸಿದೆ. ಗುಜರಾತಿನ ಎರಡನೇ ದೊಡ್ಡ ನಗರವಾಗಿರುವ ಸೂರತ್, ವಜ್ರ ಹಾಗೂ ಜವಳಿ ಉದ್ಯಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕ್ಯಾಂಪ್ಕೊ […]

ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮಾರಾಟ ಆರಂಭ

Wednesday, December 13th, 2017
mysore-silk

ಮಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ನಗರದ ಲಾಲ್‌ಭಾಗ್ ಹಿಂದಿ ಪ್ರಚಾರ ಸಮಿತಿ ಹಾಲ್‌ನಲ್ಲಿ ಆಯೋಜಿಸಿರುವ ಆರು ದಿನಗಳ ಕರ್ನಾಟಕ ಪಾರಂಪರಿಕ ಉತ್ಪನ್ನವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ಸಿಕ್ಕಿದೆ. ಇಂದಿನಿಂದ ಡಿ.18ರವರೆಗೆ ನಡೆಯಲಿರುವ ಮಾರಾಟ ಮಳಿಗೆಯನ್ನು ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಈ ಸಂದರ್ಭ ಕೆಎಸ್‌ಐಸಿ ಮಾರುಕಟ್ಟೆ ಮ್ಯಾನೇಜರ್ ಭಾನುಪ್ರಕಾಶ್, ಗ್ರಾಹಕಿ ಮಣಿಪ್ರಭಾ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು. ಈ ಪ್ರದರ್ಶನ-ಮಾರಾಟದಲ್ಲಿ 12 ಸಾವಿರ ರೂ.ನಿಂದ 1.25 […]