ಸೇವೆಯೊಂದಿಗೆ ಸಾಮಾಜಿಕ ಕಾಳಜಿ ಅಗತ್ಯ- ಕೆ. ರತ್ನಾಕರಆಚಾರ್ಯ

Wednesday, February 27th, 2019
kalikamba

ಮಂಗಳೂರು  : ಕಾರ್ಯಕರ್ತರು ಸೇವೆಯಜತೆಗೆ ಸಾಮಾಜಿಕ ಕಾಳಜಿಯನ್ನು ಹೊಂದಿರ ಬೇಕಾದುದು ಅತ್ಯವಶ್ಯ ಎಂದು ನೆಕ್ಲಾಜೆ ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಕೆ. ರತ್ನಾಕರಆಚಾರ್ಯ ನುಡಿದರು. ನಗರದ ರಥಬೀದಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ 54ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಪಾಲ್ಗೊಂಡಿದ್ದರು. ಪ್ರತೀ ದೇವಸ್ಥಾನಗಳಲ್ಲೂ ಸೇವಾ ಸಮಿತಿಗಳು ಇದ್ದೇಇರುತ್ತವೆ. ಆಡಳಿತ ವರ್ಗ ಮತ್ತು ಸೇವಾ ಸಮಿತಿಗಳು ಪರಸ್ಪರಅನ್ಯೋನ್ಯತೆಯಿಂದ ಕೆಲಸ ಮಾಡಿದಾಗ ಮಾತ್ರಕ್ಷೇತ್ರದಎಲ್ಲಾ ಕೆಲಸಗಳು ಸುಲಲಿತವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಸಮಿತಿಯಅಧ್ಯಕ್ಷ ಕೆ.ವಿ. ಜಯರಾಜ್‌ಅಧ್ಯಕ್ಷತೆ […]