ಐಎಎಸ್ ಅಧಿಕಾರಿಗಳು ಬಂದರೂ ಅಭಿವೃದ್ಧಿ ಮರೀಚಿಕೆ
Thursday, January 4th, 2018ಪುತ್ತೂರು: ಮಂಜಲ್ಪಡ್ಪು ಬಳಿಯ ಶಿಂಗಾಣಿ ಸೇತುವೆ, ಪ್ರಮುಖ ರಸ್ತೆಗಳ ವಿಸ್ತರಣೆ, ಬಿರುಮಲೆ ಅಭಿವೃದ್ಧಿ,ಉಪ್ಪಿನಂಗಡಿ ಬಳಿಯ ನದಿ ಒತ್ತುವರಿ, ರೈಲ್ವೇ ಮೇಲ್ಸೇತುವೆ, ದಿನವಹಿ ಸಂತೆ ಹೀಗೆ ಹಲವು ವಿಷಯಗಳು ಕ್ರಮೇಣ ಮೂಲೆ ಗುಂಪಾಗುತ್ತಿವೆ. ಈ ಎಲ್ಲ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಒಂದೆಡೆ ಬಳಕೆಗೂ ಲಭ್ಯವಾಗದೆ, ಇನ್ನೊಂದೆಡೆ ಅನುದಾನವೂ ಪೋಲಾಗುವ ಭೀತಿ ಎದುರಾಗಿದೆ. ಲಕ್ಷಾಂತರ ರೂ.ವನ್ನು ಯೋಜನೆಗೆ ವಿನಿಯೋಗಿಸಿದ್ದರೂ ಬಳಕೆಗೆ ಲಭ್ಯವಾಗಿಲ್ಲ. ಇದನ್ನು ಪ್ರಶ್ನಿಸಿದರೆ ಜನಪ್ರತಿನಿಧಿಗಳು ಅಧಿಕಾರಿಗಳ ಕಡೆ ಕೈ ತೋರಿಸುತ್ತಾರೆ. ಅಧಿಕಾರಿಗಳು ಮೇಲಧಿಕಾರಿಗಳ ಹೆಸರನ್ನು ಹೇಳಿ ನುಣುಚಿಕೊಳ್ಳುತ್ತಾರೆ. […]