ಸನಾತನ ನಾಟ್ಯಾಲಯದಲ್ಲಿ ಮುಂಗಾರು ರಂಗ ಸಿರಿ ಸರಣಿ
Tuesday, June 20th, 2017ಮಂಗಳೂರು: ರಂಗ ಸ್ಪಂದನ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮುಂಗಾರು ರಂಗಸಿರಿ ಸರಣಿ ಕಾರ್ಯಕ್ರಮದ ಉದ್ಘಾಟನೆಯು ನಗರದ ಸನಾತನ ನಾಟ್ಯಾಲಯದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸನಾತನ ನಾಟ್ಯಾಲಯದ ನೃತ್ಯ ಗುರು ಶಾರದಾಮಣಿ ಶೇಖರ್ ಮಾತನಾಡಿ, ಪ್ರಕೃತಿ ಮತ್ತು ಕಲೆಗೆ ಅವಿನಾಭಾವ ಸಂಬಂಧವಿದೆ. ಆದ್ದ ರಿಂದ ಮಳೆಗಾಲದಲ್ಲಿ ಹಮ್ಮಿಕೊಂಡಿ ರುವ ಈ ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಿಂದ ಕಲಾಸಕ್ತರಿಗೆ ಮನರಂಜನೆ ದೊರೆ ಯುಂತಾಗಲಿ ಎಂದು ಹಾರೈಸಿದರು. ಮಾನವ ಹಕ್ಕು ಹೋರಾಟಗಾರ ಕೊಲ್ಲಾಡಿ ಬಾಲಕೃಷ್ಣ ರೈ […]