ಬಳ್ಳಾರಿ : ದನ ಹುಡುಕಲು ಹೋದ ರೈತನ ಮೇಲೆ ಕರಡಿ ದಾಳಿ; ಗಂಭೀರ ಗಾಯ

Wednesday, October 9th, 2019
siddapura

ಬಳ್ಳಾರಿ : ಹೊಲದಲ್ಲಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ, ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಸಣ್ಣ ಮಲ್ಲಯ್ಯ ಎಂಬ ರೈತನ ಮೇಲೆ ಕರಡಿಯು ದಾಳಿ ನಡೆಸಿದ್ದು, ತಲೆ ಹಾಗೂ ಕೈ ಕಾಲುಗಳ ಮೇಲೆ ಗಂಭೀರ ಗಾಯಗಳಾಗಿವೆ. ದನಗಳನ್ನು ಹುಡುಕಲು ಹೋದಾಗ ಈ ಘಟನೆ ಸಂಭವಿಸಿದೆ. ಇನ್ನು ಸಣ್ಣ ಮಲ್ಲಯ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಕೆ ಕಾಣುತ್ತಿದ್ದಾನೆ.  

ಚಲಿಸುತ್ತಿದ್ದ ಬೊಲೆರೋ ವಾಹನದ ಮೇಲೆ ಮರ ಬಿದ್ದು ಜಖಂ

Saturday, June 15th, 2019
bollero

ಸಿದ್ದಾಪುರ: ಮಾಸ್ತಿಕಟ್ಟೆಯಿಂದ ಹೊಸಂಗಡಿ ಕಡೆಗೆ ಘಾಟಿಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೊಲೆರೋ ವಾಹನದ ಮೇಲೆ ಮರ ಬಿದ್ದು, ವಾಹನ ಜಖಂಗೊಂಡ ಘಟನೆಯು ಶುಕ್ರವಾರ ಸಂಜೆ ನಡೆದಿದೆ. ಹೊಸಂಗಡಿ ಕೆಪಿಸಿಯ ಕಚೇರಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆ ನೀಡಿದ ಬೊಲೆರೋ ವಾಹನವು ಮಾಸ್ತಿಕಟ್ಟೆಯ ಕೆಪಿಸಿ ಕಚೇರಿಯಿಂದ ಹೊಸಂಗಡಿ ಕಡೆಗೆ ಬರುವಾಗ ಈ ಘಟನೆ ನಡೆದಿದೆ. ವಾಹನದಲ್ಲಿ ಚಾಲಕ ಮತ್ತು ಇಬ್ಬರು ಕೆಪಿಸಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಯಾರಿಗೂ ಅಪಾಯವಾಗಿಲ್ಲ. ಸುಮಾರು ಅರ್ಧ ತಾಸು ಕಾಲ ಹೆದ್ದಾರಿ ಬಂದ್‌ ಆಗಿದ್ದು, ಇತರ ವಾಹನ […]