ಮಂಗಳೂರು : ರೋಟರಿ ಸಂಸ್ಥೆಯಲ್ಲಿನ ತನ್ನ ಅಪ್ರತಿಮ ಸೇವಾ ಚಟುವಟಿಕೆಗಳು ಹಾಗೂ ಗಮನಾರ್ಹ ಸಾಧನೆಗಳನ್ನು ಪರಿಗಣಿಸಿ, ರೋಟರಿ ಕ್ಲಬ್ ಬೈಕಂಪಾಡಿಗೆ 2025-2026ನೇ ಸಾಲಿನ ಪ್ರತಿಷ್ಠಿತ ‘ಪ್ಲಾಟಿನಂ ಪ್ಲಸ್’ ಕ್ಲಬ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮೈಸೂರಿನಲ್ಲಿ ವೈಭವದಿಂದ ಜರಗಿದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಆಗಿರುವ ರಾಮಕೃಷ್ಣ ಪಿ. ಕೆ. ಅವರು ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ದಿನೇಶ್ ಬಂಗೇರ ಅವರಿಗೆ ಈ ಮೌಲ್ಯಯುತ ಪ್ರಶಸ್ತಿಯನ್ನು ಹಸ್ತಾಂತರಿಸಿ ಅಭಿನಂದಿಸಿದರು. ಕ್ಲಬ್ನ ನಾಯಕತ್ವ ಮತ್ತು ನಿರಂತರ ಸಮಾಜಮುಖಿ ಕಾರ್ಯಗಳಿಗೆ ಸಂದ ದೊಡ್ಡ ಮನ್ನಣೆ ಇದಾಗಿದೆ.
ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳಾದ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಪ್ರಸಾದ್ ಪ್ರಭು ಹಾಗೂ ಯೋಗೀಶ್ ನಾಯಕ್ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಹರೀಶ್ ಬಿ. ಶೆಟ್ಟಿ, ಕಶ್ಯಪ್ ಪ್ರಭು, ಶಶಿ ಕುಮಾರ್, ರಾಜು ಶೆಟ್ಟಿ, ಜೈಸನ್ ಕ್ರಸ್ತಾ, ಜ್ಯೋತಿ ಪ್ರಕಾಶ್ ಶೆಟ್ಟಿ, ರಂಜನ್ ಶೆಟ್ಟಿ, ಕಿರಣ್ ಶೆಟ್ಟಿ, ವಿನೀತ್ ಶೆಟ್ಟಿ ಮತ್ತು ಆಶ್ರಯ್ ಶೆಟ್ಟಿ ಸೇರಿದಂತೆ ಕ್ಲಬ್ನ ಪ್ರಮುಖ ಗಣ್ಯರು ಭಾಗವಹಿಸಿ ಸಂಭ್ರಮವನ್ನು ಹಂಚಿಕೊಂಡರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









