
ಮಂಗಳೂರು : ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕಾವೂರು ಜಂಕ್ಷನ್ನಲ್ಲಿ ಬಟ್ಟೆ ಪ್ರಿಯರಿಗಾಗಿ ‘ಕೊಲ್ಕತ್ತಾ ಕಾಟನ್ ಬಜಾರ್’ ವತಿಯಿಂದ ಚೊಚ್ಚಲ ಬಾರಿಗೆ ವಿಶೇಷ ‘ಮಾನ್ಸೂನ್ ಸೀಸನ್ ಧಮಾಕಾ ಸೇಲ್’ ಆರಂಭಗೊಂಡಿದೆ. ಅತ್ಯುತ್ಕೃಷ್ಟ ದರ್ಜೆಯ ಬಟ್ಟೆಗಳನ್ನು ತೀರಾ ಅಗ್ಗದ ದರದಲ್ಲಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಬೃಹತ್ ಆಫರ್ ಪರಿಚಯಿಸಲಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗಿನ ಎಲ್ಲಾ ನಮೂನೆಯ ವೈವಿಧ್ಯಮಯ ಉಡುಪುಗಳು ಕೇವಲ 130 ರೂಪಾಯಿ ಹಾಗೂ 180 ರೂಪಾಯಿಯ ನಿಗದಿತ ದರದಲ್ಲಿ ಲಭ್ಯವಿವೆ.
ಕಾವೂರು ಜಂಕ್ಷನ್ನಲ್ಲಿರುವ ‘ಅನಂತ್ ಆರ್ಕೇಡ್’ ಕಟ್ಟಡದ ‘ನವರತ್ನ ಹಾಲ್’ನಲ್ಲಿ ಈ ಮಾನ್ಸೂನ್ ಸೇಲ್ ನಡೆಯುತ್ತಿದ್ದು, ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ಉಚಿತ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಾನುವಾರ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲೂ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಸೇಲ್ ತೆರೆದಿರಲಿದ್ದು, ಪ್ರತಿದಿನ ಹೊಸ ಹೊಸ ವಿನ್ಯಾಸದ ಕಲೆಕ್ಷನ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಅತ್ಯಂತ ಸೀಮಿತ ದಿನಗಳಿಗೆ ಮಾತ್ರ ಸೀಮಿತವಾಗಿರುವ ಈ ಮೆಗಾ ಬಂಪರ್ ಆಫರ್ನ ಲಾಭವನ್ನು ಕರಾವಳಿಯ ಸಾರ್ವಜನಿಕರು ಹಾಗೂ ಬಟ್ಟೆ ಪ್ರಿಯರು ತಕ್ಷಣವೇ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ಟ್ರೆಂಡಿ ಲಾಂಗ್ ಟಾಪ್ಗಳು, ವೆಸ್ಟರ್ನ್ ಟಾಪ್ಸ್, ಆಕರ್ಷಕ ಟಿ-ಶರ್ಟ್ಗಳು, ದುಪ್ಪಟ್ಟಾ, ಲೆಗ್ಗಿಂಗ್ಸ್, ಪಟಿಯಾಲ ಪ್ಯಾಂಟ್, ಬೆಲೂನ್ ಪ್ಯಾಂಟ್, ಧೋತಿ ಪ್ಯಾಂಟ್, ಟ್ರ್ಯಾಕ್ ಪ್ಯಾಂಟ್, ನೈಟ್ ಪ್ಯಾಂಟ್, ತ್ರಿ-ಫೋರ್ತ್, ಲಾಂಗ್ ಮಿಡಿ, ಶಾರ್ಟ್ ಮಿಡಿ, ಪೆಟಿಕೋಟ್ ಹಾಗೂ ಇಡೀ ಕುಟುಂಬಕ್ಕೆ ಅಗತ್ಯವಿರುವ ವಿವಿಧ ಮಾದರಿಯ ಅತ್ಯುತ್ತಮ ಒಳಉಡುಪುಗಳು ಮತ್ತು ಸಿದ್ಧ ಉಡುಪುಗಳ ಅಪಾರ ಸಂಗ್ರಹವೇ ಇಲ್ಲಿದೆ. ಗ್ರಾಹಕರು ಇಂದೇ ನವರತ್ನ ಹಾಲ್ಗೆ ಭೇಟಿ ನೀಡಿ ತಮ್ಮಿಷ್ಟದ ಉಡುಪುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










