ಮಂಗಳೂರು : ಕನ್ನಡಕ ಅಥವಾ ಕಾಂಟಾಕ್ಟ್ ಲೆನ್ಸ್ಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಬಯಸುವವರಿಗಾಗಿ ಮಂಗಳೂರಿನ ಪಂಪ್ವೆಲ್ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈ 26 ರಂದು ಭಾನುವಾರದಂದು ವಿಶೇಷ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಲಾಸಿಕ್, ಸ್ಮೈಲ್ ಹಾಗೂ ಪಿಆರ್ಕೆ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಕುರಿತು ತಪಾಸಣೆ ನಡೆಸಲಾಗುತ್ತದೆ. 18 ರಿಂದ 50 ವರ್ಷ ವಯಸ್ಸಿನವರು ಈ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಕೇವಲ 5 ನಿಮಿಷಗಳಲ್ಲಿ ಯಾವುದೇ ನೋವಿಲ್ಲದೆ ನೆರವೇರುವ ಈ ಸುಧಾರಿತ ಲೇಸರ್ ಚಿಕಿತ್ಸೆಯ ಬಳಿಕ ರೋಗಿಗಳು ತಕ್ಷಣವೇ ತಮ್ಮ ಎಲ್ಲಾ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಈ ಶಿಬಿರದಲ್ಲಿ ಭಾಗವಹಿಸುವವರಿಗೆ ದೃಷ್ಟಿ ಪರೀಕ್ಷೆ, ಕಣ್ಣಿನ ನರಗಳ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗೆ ಮುಂಚಿತವಾಗಿ ಮಾಡಿಸಿಕೊಳ್ಳಬೇಕಾದ ಟೋಪೋಗ್ರಫಿ ಸ್ಕ್ಯಾನ್ ಸೌಲಭ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸಲಾಗುತ್ತದೆ. ಇದರೊಂದಿಗೆ, ಚಿಕಿತ್ಸೆಗೆ ಅರ್ಹತೆ ಪಡೆಯುವ ರೋಗಿಗಳಿಗೆ ಲೇಸರ್ ಚಿಕಿತ್ಸೆಯಲ್ಲಿ ಶೇಕಡಾ 50 ರವರೆಗೆ ವಿಶೇಷ ರಿಯಾಯಿತಿ ಸೌಲಭ್ಯ ನೀಡಲಾಗುವುದು. ಈ ಸದವಕಾಶದ ಸದುಪಯೋಗ ಪಡೆದುಕೊಳ್ಳಲು ಬಯಸುವ ಸಾರ್ವಜನಿಕರು 9513726565 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸಂಕ್ಷಿಪ್ತ ಸುದ್ದಿಗಳು, ಸುದ್ದಿಗಳು










