ವರ್ಕಾಡಿ : ಕಪನಮೊಗರು ಗುತ್ತು ಕುಟುಂಬದ ಪ್ರೀತಿ ಹಾಗೂ ಒಗ್ಗಟ್ಟಿನ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ‘ಆಟಿಯ ಕೂಟ’ ಕಾರ್ಯಕ್ರಮವು ಭಾನುವಾರ, ಆಗಸ್ಟ್ 9ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 10:00 ಗಂಟೆಗೆ ಚಾಲನೆ ಸಿಕ್ಕ ಈ ಸೌಹಾರ್ದಯುತ ಸಮ್ಮಿಲನದಲ್ಲಿ ಕಪನಮೊಗರು ಗುತ್ತು ಮೂಲದ ಬಂಧುಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಸಂಭ್ರಮಿಸಿದರು.
ತಮ್ಮ ಮೂಲ ಮಣ್ಣಿನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸೇರಿದ ಈ ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಟಿ ತಿಂಡಿ-ತಿನಿಸುಗಳು ಪ್ರಮುಖ ಆಕರ್ಷಣೆಯಾಗಿದ್ದವು. ವಿವಿಧ ಮೋಜಿನ ಆಟೋಟಗಳು, ನಗು-ಸಂತಸದ ಕ್ಷಣಗಳು ಹಾಗೂ ಬಂಧುಗಳ ಪರಸ್ಪರ ಕ್ಷೇಮಸಮಾಚಾರದ ಭೇಟಿಯೊಂದಿಗೆ ಇಡೀ ವಾತಾವರಣ ಹಬ್ಬದಂತೆ ಕಳೆಗಟ್ಟಿತ್ತು. ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಕಳೆಯೇರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ತುಳುನಾಡು, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









