
ಮಂಗಳೂರು : ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ರಿ., ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು 16 DUÀ¸ÀÖ 2026 ರಂದು ಕೂಟಕಲ ಭಗವತೀ ಆಡಿಟೋರಿಯಮ್, ಕೊಡಿಯಲ್ಬೈಲ್, ಮಂಗಳೂರು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶ್ರೀ ವಿ. ಎಂ. ಸತೀಶನ್ ಅವರು ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ವಾಗ್ಮಿಗಳು ಆದ ಶ್ರೀ ರಾಧಾಕೃಷ್ಣನ್ ಮಣಿಕೋತ್ ರವರು ಭಾಗವಹಿಸಿದರು. ಹಿಂದು ಸಮುದಾಯ ಹಾಗು ಭಾರತೀಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಾಯರ್ ಸಮಾಜದ ಪಾತ್ರವನ್ನು ಶ್ಲಾಘಿಸಿದರು. ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದ್ದು ಈಗಿನ ಸಮಾಜದ ಆದ್ಯತೆ ಆಗಿರಬೇಕು ಹಾಗು ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಂಗಳೂರು ವಿಭಾಗದ ಕಾರ್ಯಚಟುವಟಿಕೆಗಳನ್ನು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಬೆಸೆದಿರುವ ಭಾಂಧವ್ಯ ಶ್ಲಾಘನೀಯ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಮುರಳಿ ಹೊಸಮಜಲು, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಈ ಓಣಂ ಮಹೋತ್ಸವ ಮಂಗಳೂರಿನಲ್ಲಿರುವ ಎಲ್ಲಾ ಮಲಯಾಳಿ ಸಂಘಟನೆಗಳನ್ನು ಸ್ಥಳೀಯ ಸಂಘಸಂಸ್ಥೆಗಳನ್ನು ಜೋಡಿಸಿಕೊಂಡು ಮಾಡುತ್ತಿರುವ ಉತ್ಸವವಾಗಿದೆ ಎಂದರು.
ಓಣಂ ಹಬ್ಬವು ಒಂದು ಉತ್ಸವ ಮಾತ್ರವಲ್ಲ ಜಾತಿ, ಮತ, ರಾಜಕೀಯ, ಬಾಷಾಬೇಧವಿಲ್ಲದೆ ಎಲ್ಲರೊಂದಿಗೆ ಸಹಬಾಳ್ವೆಯಿಂದ, ಸಾಮರಸ್ಯದಿಂದ ಮತ್ತು ಐಕ್ಯತೆಯಿಂದ ಬಾಳಬೇಕೆಂದು ನೀಡುವ ಸಂದೇಶ ಕೂಡ ಆಗಿದೆ ಮತ್ತು ಮಂಗಳೂರಿನ ಜನತೆಯೊಂದಿಗೆ ಸೇರಿಕೊಂಡು ಮಂಗಳೂರು, ಕರ್ನಾಟಕದ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಯರ್ ಜನಾಂಗವು ಮಹತ್ವ ಪಾತ್ರವನ್ನು ವಹಿಸಿದ್ದು ಇನ್ನು ಕೂಡ ಅದನ್ನು ಉನ್ನತಿಗೆ ಏರಿಸಬೇಕೆಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಶ್ರೀ. ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ದಕ್ಷಿಣ, ಶ್ರೀ. ಐವನ್ ಡಿಸೋಜ಼ ವಿಧಾನ ಪರಿಷತ್ ಸದಸ್ಯರು ಮಂಗಳೂರು, ಶ್ರೀ. ಸತೀಶ್ ಕುಂಪಲ ಅಧ್ಯಕ್ಷರು ಬಿಜೆಪಿ ದಕ್ಷಿಣ ಕನ್ನಡ, ಶ್ರೀ. ರಮಾನಾಥ ರೈ ಮಾಜಿ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ, ಶ್ರೀ. ಸತ್ಯನ್ ಪಲುಗುಲು ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥರು ಯೂನಿಯನ್ ಬ್ಯಾಂಕ್, ಶ್ರೀಮತಿ ತೇಜಸ್ವಿನಿ ಡಿ.ಜಿ.ಎಮ್ ಹಾಗೂ ಪ್ರಾದೇಶಿಕ ಮುಖ್ಯಸ್ಥರು ಯೂನಿಯನ್ ಬ್ಯಾಂಕ್, ಶ್ರೀ. ಪಿ.ವಿ. ಅಭಿಲಾಷ್ ಟ್ರಸ್ಟಿ ಶ್ರೀ ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಶ್ರೀ. ಟಿ.ಕೆ. ರಾಜನ್ ಅಧ್ಯಕ್ಷರು ಕೇರಳ ಸಮಾಜಂ, ಶ್ರೀ. ಸಂದೇಶ್ ಎಮ್. ಅಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಸಮಾಜ, ಶ್ರೀ. ಅಜಿತ್ ಕುಮಾರ್ ಕುಲಾಯಿ ಅಧ್ಯಕ್ಷರು ಕೈರಳಿ ಕಲಾವೇಧಿ ಸುರತ್ಕಲ್, ಶ್ರೀ. ಮೋಹನ್ ಟಿ.ವಿ ಅಧ್ಯಕ್ಷರು ಶ್ರೀ ನಾರಾಯಣ ಸಾಂಸ್ಕೃತಿಕ ಕಲಾವೇಧಿ, ಶ್ರೀ. ಸೂರಜ್ ರಾಘವನ್ ಅಧ್ಯಕ್ಷರು ಕರಾವಳಿ ಫ್ರೆಂಡ್ಸ್ ಕ್ಲಬ್ ಹಾಗೂ ಅಯ್ಯಪ್ಪ ಕ್ಷೇತ್ರ ಅತ್ತಾವರ, ಡಾ. ಸಿಂಧು ಎಸ್. ಅಧ್ಯಕ್ಷರು ಮಲಯಾಳಿ ಸಮಾಜ ಮಂಗಳೂರು, ಶ್ರೀ. ಮನೋಹರ ಕುರುಪ್ ಚೇರ್ಮ್ಯಾನ್ ಕೆ.ಎನ್.ಎಸ್.ಎಸ್. ಬೋರ್ಡ್ ಬೆಂಗಳೂರು, ಶ್ರೀ. ನಾರಾಯಣನ್ ನಂಬಿಯಾರ್ ಕಾರ್ಯದರ್ಶಿಗಳು ಕೆ.ಎನ್.ಎಸ್.ಎಸ್. ಬೋರ್ಡ್ ಬೆಂಗಳೂರು, ಶ್ರೀ. ಸತೀಶ್ ಎನ್.ಡಿ ಉಪಾಧ್ಯಕ್ಷರು ಕೆ.ಎನ್.ಎಸ್.ಎಸ್. ಬೋರ್ಡ್ ಬೆಂಗಳೂರು, ಶ್ರೀ. ಮೋಹನ್ ಕುಮಾರ್ ಉಪಾಧ್ಯಕ್ಷರು ಕೆ.ಎನ್.ಎಸ್.ಎಸ್. ಬೋರ್ಡ್ ಬೆಂಗಳೂರು, ಶ್ರೀ. ವಿಜಯ ಕುಮಾರ್ ಖಜಾಂಚಿ ಕೆ.ಎನ್.ಎಸ್.ಎಸ್. ಬೆಂಗಳೂರು, ಶ್ರೀ. ಹರೀಶ್ ಕುಮಾರ್ ಜೊತೆ ಕಾರ್ಯದರ್ಶಿ ಕೆ.ಎನ್.ಎಸ್.ಎಸ್. ಬೆಂಗಳೂರು ಭಾಗವಹಿಸಿದರು.
ಇವರೊಂದಿಗೆ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ನಾಯರ್, ಕಾಯ౯ದಶಿ౯ ಶ್ರೀಮತಿ ಶ್ರೀಜಾ ನಂಬಿಯಾರ್, ಖಜಾಂಚಿ ಶ್ರೀಮತಿ ಗೋಪಿಕ ರಾಣಿ, ಓಣಂ ಉತ್ಸವ ಸಂಯೋಜಕರಾದ ಶ್ರೀ. ಎಮ್.ವಿ.ರಾಜನ್, ಶ್ರೀ ನಾರಾಯಣ್ ಕೆಲೋತ್, ಶ್ರೀ.ಜ್ಯೋತಿಶ್ ಕುಮಾರ್, ಶ್ರೀ. ವಿಜಯ ಕುಮಾರ್, ಶ್ರೀ. ಪಿ.ಕೆ.ಯಸ್. ಪಿಳ್ಳೈ, ಶ್ರೀ. ಸತೀಶ್ ಕುಮಾರ್ ಆರ್. ಯಲ್, ಶ್ರೀಮತಿ. ಮಂಜು ಅಜಿತ್, ಶ್ರೀಮತಿ, ವಾಸಂತಿ, ಹಾಗೂ ಸಮಿತಿಯ ಸದಸ್ಯರು, ಕುಟುಂಬ ವಗ౯ ಮತ್ತು ಇತರರು ಉಪಸ್ಥಿತರಿದ್ದರು.
ಕಾಯ౯ಕ್ರಮ ಮುಖ್ಯಾಂಶ
ಸಂಘದ ಸದಸ್ಯರು ಮತ್ತು ಇಂಡಿಯನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ನ ಏವಿಯೇಷನ್ ವಿಧ್ಯಾಥಿ౯ಗಳಿಂದ ಸಾಂಸ್ಕೃತಿಕ ಕಾಯ౯ಕ್ರಮ ನಡೆಯಿತು. ನಾಯರ್ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರು ಮತ್ತು ಕುಟುಂಬ ವಗ౯ ಹಾಗೂ ಪ್ರತಿಭಾನ್ವಿತ ವಿಧ್ಯಾಥಿ౯ಗಳಿಗೆ ಅವರ ಸಾಧನೆಗೆ ಗೌರವಿಸಲಾಯಿತು. ಸಾಂಪ್ರದಾಯಿಕ ಹಾಗು ರುಚಿಕರವಾದ ಕೇರಳ ಶೈಲಿಯ ಓಣಂ ಸಧ್ಯವನ್ನು ಎಲ್ಲಾ ಅತಿಥಿಗಳಿಗೆ ಸವಿಸಲಾಯಿತು.
ಓಣಂ ಹಬ್ಬದಲ್ಲಿ ವಿಶೇಷವಾಗಿ ಗೌರವಿಸಲ್ಪಡುವ ಮಾಹಾಬಲಿ ಚಕ್ರವರ್ತಿಯ ವೇಷಧಾರಿ ಕಲಾವಿದರು ಹಾಗು ಹೂವಿನ ರಂಗೋಲಿ (ಪೂಕಲಂ) ಈ ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು.
ನಾಯರ್ ಸಮಾಜದ ಭಾಂಧವರಿಗಾಗಿ ವಿಶೇಷವಾಗಿ ಓಣಂ ಆಟೋಟಗಳಾದ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟವನ್ನು ಆಯೋಜಿಸಲಾಯಿತು.
ಖಜಾಂಚಿ ಶ್ರೀ. ಅಜಯ್ ಕುಮಾರ್ ವಂದಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಶ್ರೀಮತಿ. ನವ್ಯ ಕುರುಪ್, ಶ್ರೀಮತಿ. ಸಿಂಧು, ಶ್ರೀಮತಿ. ಗ್ರೀಷ್ಮ ಹಾಗು ಶ್ರೀಮತಿ. ಶೀಜ ನಂಬಿಯಾರ್ ಸಮರ್ಪಕರಾಗಿ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









