ಮಂಗಳೂರು: ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯು 2026ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಈ ಪ್ರಕಟಣೆ ಹೊರಡಿಸಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ತಲಾ 7 ಶಿಕ್ಷಕರಂತೆ ಒಟ್ಟು 21 ಸಾಧಕ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಸೇರ್ಕಳ ಶಾಲೆಯ ದಾಮೋದರ, ಬೆಳ್ತಂಗಡಿಯ ಮುಂಡ್ರುಪಾಡಿಯ ಚಿತ್ರಪ್ರಭಾ, ಮಂಗಳೂರು ಉತ್ತರ ವಲಯದ ಸ್ಯಾಂಡ್ಪೀಟ್ ಶಾಲೆಯ ಉಮಾಲಕ್ಷ್ಮಿ, ಮಂಗಳೂರು ದಕ್ಷಿಣ ವಲಯದ ಬದ್ರಿಯಾನಗರದ ಪ್ಲೇವಿ ಜೆಸಿಂತ ಮಿರಾಂದ, ಮೂಡುಬಿದಿರೆಯ ಪೆಂಜಾರಿನ ಶ್ರೀವಾಣಿ, ಪುತ್ತೂರಿನ ಹೊಸ್ತೋಟ ಶಾಲೆಯ ಮಾಲತಿ ಹಾಗೂ ಸುಳ್ಯದ ಪಾಂಡಿಗದ್ದೆ ಶಾಲೆಯ ಯಶೋಧರ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಂಟ್ವಾಳದ ವಿಟ್ಲ ಪಿಎಂಶ್ರೀ ಶಾಲೆಯ ವಿದ್ಯಾಶಂಕರ್ ಡಿ., ಬೆಳ್ತಂಗಡಿಯ ಅಂಡೆತಡ್ಕ ಶಾಲೆಯ ಮುಖ್ಯಶಿಕ್ಷಕ ಕೃಷ್ಣಪ್ಪ ಪೂಜಾರಿ, ಮಂಗಳೂರು ಉತ್ತರದ ಕಾಟಿಪಳ್ಳ ಶಾಲೆಯ ಇಂದಿರಾ ಎಸ್., ಮಂಗಳೂರು ದಕ್ಷಿಣದ ಉಚ್ಚಿಲಗುಡ್ಡೆ ಶಾಲೆಯ ಹರೀಶ್ ಕುಮಾರ್ ಬಿ.ಎಂ. ಹಾಗೂ ಪುತ್ತೂರಿನ ಸಾಮೆತ್ತಡ್ಕ ಶಾಲೆಯ ಭುವನೇಶ್ವರಿ ಕೆ. ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಬಂಟ್ವಾಳ ಮಂಚಿ ಕೊಳ್ಳಾಡು ಶಾಲೆಯ ವಿಜಯಲಕ್ಷ್ಮಿ, ಬೆಳ್ತಂಗಡಿ ವೇಣೂರು ಶಾಲೆಯ ರವೀಂದ್ರ ಕೆ., ಮಂಗಳೂರು ಉತ್ತರದ ಸಂತ ಅಲೋಶಿಯಸ್ ಪ್ರೌಢಶಾಲೆಯ ಪ್ರವೀಣ್ ಕುಟಿನ್ಹೋ, ಮಂಗಳೂರು ದಕ್ಷಿಣದ ಮುಚೂರು ಶಾಲೆಯ ದೈಹಿಕ ಶಿಕ್ಷಕ ಕಿಶೋರ್, ಮೂಡುಬಿದಿರೆ ಮೂಡುಮಾರ್ನಾಡು ಶಾಲೆಯ ಜಾನ್ ರೊನಾಲ್ಡ್ ಡಿಸೋಜ, ಪುತ್ತೂರು ನೆಲ್ಯಾಡಿ ಸಂತ ಜಾರ್ಜ್ ಶಾಲೆಯ ಥಾಮಸ್ ಎಂ.ಐ. ಮತ್ತು ಸುಳ್ಯ ಸರಕಾರಿ ಪ್ರೌಢಶಾಲೆಯ ಕಿಶೋರ್ ಕುಮಾರ್ ಅವರಿಗೆ ಈ ಗೌರವ ಒಲಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









