ಬೆಳ್ತಂಗಡಿ : ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು (ಜಮಾಲಾಬಾದ್ ಕೋಟೆ) ಚಾರಣಕ್ಕೆ ವನ್ಯಜೀವಿ ವಿಭಾಗದಿಂದ ಮತ್ತೆ ಚಾಲನೆ ಸಿಕ್ಕಿದೆ. ಜುಲೈ 8 ರಂದು ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಪರಿಗಣಿಸಿ ಚಾರಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿ ವಾತಾವರಣವು ಅನುಕೂಲಕರವಾಗಿರುವುದರಿಂದ ಚಾರಣಿಗರಿಗೆ ಗಡಾಯಿಕಲ್ಲು ಏರಲು ವನ್ಯಜೀವಿ ವಿಭಾಗ ಹಸಿರು ನಿಶಾನೆ ತೋರಿದೆ.
ಚಾರಣಿಗರ ಸುರಕ್ಷತೆ ಮತ್ತು ಪರಿಸರದ ಹಿತದೃಷ್ಟಿಯಿಂದ ದಿನಕ್ಕೆ ಗರಿಷ್ಠ 500 ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಚಾರಣ ಕೈಗೊಳ್ಳಲು ಬಯಸುವವರು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡು ಸ್ಲಾಟ್ ಕಾಯ್ದಿರಿಸುವುದು ಕಡ್ಡಾಯವಾಗಿದೆ. ನಿಗದಿತ ದಿನದಂದು ಪ್ರವೇಶ ದ್ವಾರಕ್ಕೆ ಆಗಮಿಸಿ ನಿಗದಿತ ಶುಲ್ಕ ಪಾವತಿಸಿ ಚಾರಣ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಬೆಳ್ತಂಗಡಿ ವನ್ಯಜೀವಿ ಶ್ರೇಣಿ ಅಧಿಕಾರಿ ಶರ್ಮಿಷ್ಠಾ ಮಾಹಿತಿ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಪ್ರಾದೇಶಿಕ ಸುದ್ದಿಗಳು









