ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ (27) ಅವರ ಹತ್ಯೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರೀತು ಅಲಿಯಾಸ್ ಪ್ರೀತೇಶ್ ಸುಲಾಯ ಮತ್ತು ಕಿರಣ್ ಅಲಿಯಾಸ್ ಮಣಿ ಎಂಬಿಬ್ಬರು ಶಿಕ್ಷೆಗೆ ಗುರಿಯಾದ ದೋಷಿಗಳಾಗಿದ್ದಾರೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾನಂದ ನಾಯ್ಕ್ ಅವರು, ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ, ಹಾಗೆಯೇ ಸೆಕ್ಷನ್ 341 ರಡಿ 3 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಸಂಗ್ರಹವಾಗುವ ಒಟ್ಟು ದಂಡದ ಮೊತ್ತದಲ್ಲಿ ₹5.90 ಲಕ್ಷ ರೂಪಾಯಿಯನ್ನು ಮೃತ ಕಾರ್ತಿಕ್ ಅವರ ತಾಯಿ ಹೇಮಾವತಿ ಅವರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
ಇದೇ ಪ್ರಕರಣದಲ್ಲಿದ್ದ ಮತ್ತೊಬ್ಬ ಆರೋಪಿ ಮಂಗಳೂರು ಅತ್ತಾವರದ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ಅವರನ್ನು ಕೋರ್ಟ್ ನಿರ್ದೋಷಿಯೆಂದು ಖುಲಾಸೆಗೊಳಿಸಿದೆ. ಜಮೀನಿನಲ್ಲಿದ್ದ ಇನ್ನೊಬ್ಬ ಆರೋಪಿ ಚರಣ್ ರಾಜ್ ರೈ ಎಂಬಾತ 2022ರಲ್ಲೇ ಕೊಲೆಯಾಗಿದ್ದ. 2019ರ ಸೆಪ್ಟೆಂಬರ್ 3ರಂದು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯದಲ್ಲಿ ನಡೆಯಕ್ಕಿದ್ದ ಈ ಭೀಕರ ಹತ್ಯೆ ಪ್ರಕರಣವನ್ನು ಆಗಿನ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









