ಮಂಗಳೂರು : ಸುರತ್ಕಲ್ ಠಾಣಾ ಪೊಲೀಸರ ಕಿರುಕುಳ ಹಾಗೂ ವಿಚಾರಣೆಯ ನೆಪದಲ್ಲಿ ನಡೆದ ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಹೊಸಬೆಟ್ಟುವಿನ ಸೋಮನಾಥ್ ಅವರ ನಿವಾಸಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು, ಈ ದುರಂತಕ್ಕೆ ಕಾರಣರಾದ ಪೋಲೀಸ್ ಸಿಬ್ಬಂದಿಯ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಿಂದ ಲಭ್ಯವಾದ ಮಾಹಿತಿಯಂತೆ, ತಡರಾತ್ರಿ ವೇಳೆಯಲ್ಲಿ ಸಮುದ್ರ ತೀರದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಹಾಗೂ ಯುವತಿಯನ್ನು ಕಂಡು, ಸಾರ್ವಜನಿಕ ಸುರಕ್ಷತೆ ಹಾಗೂ ಆತ್ಮಹತ್ಯೆಯಂತಹ ಅನಾಹುತ ತಡೆಯುವ ಒಳ್ಳೆಯ ಉದ್ದೇಶದಿಂದಷ್ಟೇ ಸನಿಹದ ಮನೆಯವರು ವಿಚಾರಣೆ ನಡೆಸಿದ್ದರು. ಅಲ್ಲಿ ಯಾವುದೇ ಧರ್ಮ, ಜಾತಿಯ ಆಧಾರದ ಮೇಲೆ ಪ್ರಶ್ನಿಸುವುದಾಗಲಿ ಅಥವಾ ಹಲ್ಲೆ ನಡೆಸುವುದಾಗಲಿ ನಡೆದಿಲ್ಲ. ಆದರೂ ಪೊಲೀಸರು ಸೋಮನಾಥರನ್ನು ಠಾಣೆಗೆ ಕರೆಸಿ, ಯುವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿ ಅದನ್ನು ವಿಡಿಯೋ ಚಿತ್ರೀಕರಿಸಿ ತೀವ್ರವಾಗಿ ಅವಮಾನಿಸಿದ್ದಾರೆ. ದೂರು ನೀಡಿದ ಯುವತಿಯೇ ತನಗೆ ಯಾವುದೇ ದೈಹಿಕ ಹಲ್ಲೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಠಾಣೆಯಲ್ಲಿ ಕುಳ್ಳಿರಿಸಿ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡುವುದಾಗಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಶಾಸಕರು ಆರೋಪಿಸಿದರು.
ಈ ನಿರಪರಾಧಿಯ ಅಕಾಲಿಕ ಸಾವಿಗೆ ಪೋಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಾಗಿದ್ದು, ತಕ್ಷಣವೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸ್ವಾಭಿಮಾನಿ ಹಾಗೂ ಕಷ್ಟಪಟ್ಟು ಜೀವಿಸುವ ಮೊಗವೀರ ಸಮುದಾಯದವರು ತಮ್ಮ ಸುತ್ತಮುತ್ತ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ಎಂದಿಗೂ ಸಹಿಸುವುದಿಲ್ಲ. ಸೋಮನಾಥ್ ಅವರ ಸಾವಿಗೆ ಕಾರಣರಾದ ಪೋಲೀಸರ ಜೊತೆಗೆ ದೂರುದಾರ ಯುವಕ ಮತ್ತು ಯುವತಿಯ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕುಟುಂಬಸ್ಥರು ಹಾಗೂ ಸ್ಥಳೀಯರ ನ್ಯಾಯಯುತ ಬೇಡಿಕೆಯನ್ನು ಶಾಸಕರು ಬೆಂಬಲಿಸಿದರು.
ಸುರತ್ಕಲ್ ಸೋಮನಾಥ್ ಆತ್ಮಹತ್ಯೆ ಪ್ರಕರಣ: ತಪ್ಪಿತಸ್ಥ ಪೋಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು