ಮಂಗಳೂರು : ನಗರದ ಜನಪ್ರಿಯ ಮತ್ತು ವಿಶ್ವಾಸಾರ್ಹ ಪಟಾಕಿ ಮಳಿಗೆಯಾದ ಬಿ. ಗಣಪತಿ ಬಂಡಾರ್ಕರ್ ಅಂಡ್ ಸನ್ಸ್ ಸಂಸ್ಥೆಯು ಈ ಬಾರಿ ತನ್ನ ಹೆಮ್ಮೆಯ 75ನೇ ವಾರ್ಷಿಕೋತ್ಸವದ (ರೂಬಿ ಜುಬಿಲಿ) ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಲು ಸಂಸ್ಥೆಯು ತನ್ನ ಮಳಿಗೆಯಿಂದ ಪಟಾಕಿಗಳನ್ನು ಖರೀದಿಸುವ ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದೆ. ಇದರಡಿ ಅದೃಷ್ಟಶಾಲಿ ಗ್ರಾಹಕರು ಅತ್ಯಾಧುನಿಕ ಐಫೋನ್ 18 ಹಾಗೂ ಆಕರ್ಷಕ ಚಿನ್ನದ ನಾಣ್ಯಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.
ಈ ಬಾರಿ ವಿಭಿನ್ನ ಹಾಗೂ ವೈವಿಧ್ಯಮಯ ಪಟಾಕಿಗಳ ದೊಡ್ಡ ಶ್ರೇಣಿಯೇ ಲಭ್ಯವಿದ್ದು, ಸಾಂಪ್ರದಾಯಿಕ ಶೈಲಿಯ ನೆಲ ಚಕ್ರ, ಫ್ಲವರ್ ಪೋಟ್, ಆಕಾಶಕ್ಕೆ ಚಿಮ್ಮುವ ರಾಕೆಟ್ಗಳು, ಸರಣಿ ಮಾಲೆ ಪಟಾಕಿಗಳು, ಶಬ್ದ ಮಾಡುವ ಚಾಟಿಗಳು ಹಾಗೂ ವರ್ಣಮಂಜರಿ ಚೆಲ್ಲುವ ಫೈರ್ ಸ್ಟಿಕ್ಗಳು ಸೇರಿದಂತೆ ಹತ್ತಾರು ಹಬ್ಬದ ಸುಡುಮದ್ದುಗಳು ಗ್ರಾಹಕರ ಕಣ್ಮನ ಸೆಳೆಯುತ್ತಿವೆ. ಪರಿಸರ ಸ್ನೇಹಿ ಹಾಗೂ ಹಸಿರು ಸಂಭ್ರಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ಯಾವುದೇ ಹಾನಿಕಾರಕ ವಸ್ತುವಿಲ್ಲದ ಮತ್ತು ಶಬ್ದ ಮಾಲಿನ್ಯ ರಹಿತ ಮಕ್ಕಳ ಹಸಿರು ಪಟಾಕಿಗಳು ಕೂಡ ಇಲ್ಲಿ ಮಾರಾಟಕ್ಕೆ ಲಭ್ಯವಿವೆ.
ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಗ್ರಾಹಕರು ನೇರವಾಗಿ ಮಳಿಗೆಗೆ ಭೇಟಿ ನೀಡಿ ಪಟಾಕಿಗಳನ್ನು ಖರೀದಿಸಬಹುದಾಗಿದ್ದು, ಮಂಗಳೂರು ಬಂದರು ಪ್ರದೇಶದ ಜೆ.ಎಂ. ರಸ್ತೆ, ಮಹಮದಾಲಿ ರಸ್ತೆ ಹಾಗೂ ಕಾರ್ಸ್ಟ್ರೀಟ್ನಲ್ಲಿರುವ ವಾಮನಾಶ್ರಮ ಬಿಲ್ಡಿಂಗ್ನಲ್ಲಿರುವ ಮಳಿಗೆಗಳಿಗೆ ತೆರಳಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ಮುಂಗಡ ಬುಕಿಂಗ್ಗೆ 98803 70446 ಅಥವಾ 97316 04827 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ವಿಶೇಷವೆಂದರೆ, ಈ ಸಂಸ್ಥೆಯು ಪ್ರಸಿದ್ಧ ಸಿಲ್ಕೋ ಕಂಪನಿಯ ತೂಕದ ಯಂತ್ರಗಳ ಮಾರಾಟದ ಅಧಿಕೃತ ವಿತರಕರೂ ಆಗಿ ಸೇವೆ ಸಲ್ಲಿಸುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









