ಮಂಗಳೂರು : ಬ್ರಿಟಿಷರ ಆಡಳಿತಾವಧಿಯ ಸುಮಾರು ಎರಡು ಶತಮಾನಗಳ ರೋಚಕ ಇತಿಹಾಸ ಹೊಂದಿರುವ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಪಾರಂಪರಿಕ ಕಟ್ಟಡವನ್ನು ತೆರವುಗೊಳಿಸಿ, ಆಧುನಿಕ ಸ್ಪರ್ಶದ ನೂತನ ಸಂಕೀರ್ಣ ನಿರ್ಮಿಸಲು ಸಿದ್ಧತೆಗಳು ಬಿರುಸಿನಿಂದ ಸಾಗಿವೆ. 1806ರಲ್ಲಿ ತನ್ನ ಸೇವಾ ಪಯಣ ಆರಂಭಿಸಿದ್ದ ಈ ನ್ಯಾಯಾಂಗ ಸಂಸ್ಥೆಯು 1862ರಲ್ಲಿ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡದಲ್ಲಿ 2014ರವರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವಾಗಿ ನಿರಂತರವಾಗಿ ಕಾರ್ಯನಿರ್ವಹಿಸಿ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿತ್ತು.
ಬಳಿಕ ಪ್ರಸ್ತುತ ಚಾಲ್ತಿಯಲ್ಲಿರುವ ಕೋರ್ಟ್ ಸಂಕೀರ್ಣಕ್ಕೆ ನ್ಯಾಯಾಲಯದ ಕಲಾಪಗಳು ಸ್ಥಳಾಂತರಗೊಂಡಿದ್ದು, ಇದೀಗ ಅದೇ ಹಳೆಯ ಕಟ್ಟಡದ ಜಾಗದಲ್ಲಿ ಅಂದಾಜು 60 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಅಂತಸ್ತಿನ ಸುಸಜ್ಜಿತ ನ್ಯಾಯಾಲಯ ಕಚೇರಿ ಸಂಕೀರ್ಣ ತಲೆಎತ್ತಲಿದೆ. ಸುದೀರ್ಘ ಇತಿಹಾಸದ ನೆನಪುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡೇ ಆಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯಗಳೊಂದಿಗೆ ನಿರ್ಮಾಣಗೊಳ್ಳಲಿರುವ ಈ ನೂತನ ಕಟ್ಟಡವು ಮಂಗಳೂರಿನ ನ್ಯಾಯಾಂಗ ಕ್ಷೇತ್ರಕ್ಕೆ ಹೊಸ ಮೆರುಗು ನೀಡಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









