ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರು ಎಸ್ಐಟಿ ಮುಂದಾಳತ್ವ ವಹಿಸಿರುವ ಪ್ರಣವ್ ಮೊಹಾಂತಿಯನ್ನು ಕೆಬಿಡಬೇಕು ಎಂದು ಮಾಜಿ ಡಿ ವೈ ಎಸ್ ಸ್ಪಿ ಅನುಪಮ ಶೆಣೈ ಆಗ್ರಹಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಮಾತಾಡಿದ ಅವರು ಪ್ರಣವ್ ಮೊಹಂತಿ ಅತ್ಯಾಚಾರ ಮತ್ತು ಹತ್ಯೆ ಕುರಿತಾದ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಮೊಹಂತಿ ನೇಮಕದಲ್ಲಿ ಕೆ.ಜೆ.ಜಾರ್ಜ್ ಕೈ ವಾಡವಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮೊಹಂತಿ ನೇಮಕದಿಂದ ಪೊಲೀಸರ ನೈತಿಕ ಬಲ ಕುಗ್ಗಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ಕೊಲೆಗಳ ತನಿಖೆಗೆ ನೇಮಕವಾದ SIT ತಂಡದ ಮುಂದಾಳತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರನಬ್ ಮೊಹಾಂತಿಯವರ ಬದಲು ಇದರ ಮುಂದಾಳತ್ವವನ್ನು ಡಾ.ಕೆ. ರಾಮಚಂದ್ರ ರಾವ್ ಅಥವಾ ದಯಾನಂದರಂತಹ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು .
‘ಪ್ರಣಬ್ B.E., M.S in Computer Science, PhD ಹಾಗು ಇವರು certified Forensic Computer Examiner ಆಗಿರುತ್ತಾರೆ. ಇವೆಲ್ಲವನ್ನು ಗಮನಿಸಿದಾಗ, ಇವರ ನೈಪುಣ್ಯತೆಯು Cyber Crime ಆಗಿದೆಯೇ ವಿನ: ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಇವರು ಸೂಕ್ತ ವ್ಯಕ್ತಿಯಲ್ಲ ಎಂದು ಪೊಲೀಸರೇ ಹೇಳುತ್ತಿದ್ದಾರೆ ಎಂದರು.
ಈ ಹಿಂದೆ ಮಂಗಳೂರಿನ ಚರ್ಚ್ ಗಲಭೆಯ ರಾಜಕೀಯದಿಂದಾಗಿ ಕನ್ನಡಿಗ ಡಿವೈಎಸ್ಪಿ ಎಂ.ಕೆ.ಗಣಪತಿಯವರು ಸಚಿವ ಕೆ.ಜೆ.ಜಾರ್ಜ್ ರಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಡಿವೈಎಸ್ಪಿ ಗಣಪತಿಯವರು ಕೆ.ಜೆ.ಜಾರ್ಜ್ ಜತೆ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು.
ಹೀಗಾಗಿ ಈ SIT ಮುಖಂಡರಾಗಿ ಪ್ರಣಬ್ ಮೊಹಾಂತಿಯವರ ನೇಮಕದಲ್ಲಿ ಕೆ.ಜೆ.ಜಾರ್ಜ್ ರವರ ಕೈವಾಡ ಇದೆ ಎಂದೇ ಪೊಲೀಸರು ಹೇಳುತ್ತಿದ್ದಾರೆ. ಸರಕಾರ ಈ ಕೂಡಲೆ ಪೊಲೀಸರ ಭಾವನೆಗೆ ಗೌರವ ಕೊಟ್ಟು ಪುಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಿ ಬೇರೆ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು’.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









