ಕಾಸರಗೋಡು : ಕಾಸರಗೋಡಿನ ಕುಂಬಳೆ ಬಳಿಯ ಬಂಬ್ರಾಣ ಪ್ರದೇಶದಲ್ಲಿರುವ ಶಾಲೆಯೊಂದರ ಆವರಣದಲ್ಲಿ ಗಾಂಜಾ ಗಿಡವೊಂದು ಬೆಳೆದು ನಿಂತಿರುವುದು ಬೆಳಕಿಗೆ ಬಂದಿದೆ. ರಜಾ ದಿನದಲ್ಲಿ ಶಾಲಾ ಮೈದಾನಕ್ಕೆ ಆಟವಾಡಲು ತೆರಳಿದ್ದ ಸ್ಥಳೀಯ ಯುವಕರು ಈ ಗಿಡವನ್ನು ಮೊದಲು ಗಮನಿಸಿದ್ದಾರೆ. ಸಂಶಯಗೊಂಡು ಅವರು ತಕ್ಷಣವೇ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸಮಾಚಾರ ಮುಟ್ಟಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಜಾಗರೂಕರಾದ ಅಬಕಾರಿ ಅಧಿಕಾರಿಗಳ ತಂಡವು ಶಾಲೆಗೆ ಧಾವಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಸರಿಸುಮಾರು 50 ಸೆಂಟಿಮೀಟರ್ ಎತ್ತರಕ್ಕೆ ಬೆಳೆದಿದ್ದ ಗಾಂಜಾ ಗಿಡ ಇರುವುದು ದೃಢಪಟ್ಟಿದೆ. ಸದ್ಯ ಆ ಗಿಡವನ್ನು ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಶಾಲಾ ಆವರಣದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಯಾರಾದರೂ ನೆಟ್ಟಿದ್ದಾರೆಯೇ ಅಥವಾ ತಾನಾಗಿಯೇ ಬೆಳೆದಿದೆಯೇ ಎಂಬ ಕೋನದಲ್ಲಿ ತನಿಖೆ ಆರಂಭಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










