ಕಾಸರಗೋಡು : ಕೇರಳ ಕಡಲ ಗಡಿಯನ್ನು ಅತಿಕ್ರಮಿಸಿ ಹಾಗೂ ಕಾನೂನುಬಾಹಿರವಾಗಿ ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದ ಕರ್ನಾಟಕ ನೋಂದಣಿಯ ‘ಬಲರಾಮ್’ ಎಂಬ ಮೀನುಗಾರಿಕಾ ದೋಣಿಯನ್ನು ಮರೈನ್ ಎನ್ಫೋರ್ಸ್ಮೆಂಟ್ ಅಧಿಕಾರಿಗಳು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಈ ಕೃತ್ಯ ಎಸಗಿದ್ದಕ್ಕಾಗಿ ದೋಣಿ ಮಾಲೀಕರಿಗೆ ಒಟ್ಟು 2.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ನೀಲೇಶ್ವರದ ಐತ್ತಲ ಸಮುದ್ರ ತೀರದ ವ್ಯಾಪ್ತಿಯಲ್ಲಿ ಮೀನುಗಾರಿಕಾ ವಿಸ್ತರಣಾ ಅಧಿಕಾರಿ ಸಂಗೀತ್ ಎ.ಕೆ. ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಧಿಕಾರಿಗಳ ತಂಡವು ಈ ಕಾರ್ಯಾಚರಣೆಯನ್ನು ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಯನ್ನು ಪತ್ತೆಹಚ್ಚಿದೆ.
ಮುಂದುವರಿದು ತಪಾಸಣೆ ನಡೆಸಿದಾಗ, ದೋಣಿಯಲ್ಲಿ ಮೀನುಗಳನ್ನು ಆಕರ್ಷಿಸಲು ಅಕ್ರಮವಾಗಿ 1,000 ವ್ಯಾಟ್ ಸಾಮರ್ಥ್ಯದ ಎಂಟು ಲೈಟ್ಗಳು ಮತ್ತು 2,000 ವ್ಯಾಟ್ ಸಾಮರ್ಥ್ಯದ ಒಂದು ಪ್ರಬಲ ಲೈಟನ್ನು ಅಳವಡಿಸಿರುವುದು ಬೆಳಕಿಗೆ ಬಂದಿದೆ. ಕೇರಳ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆಯ (ಕೆಎಂಎಫ್ಆರ್) ಅಡಿಯಲ್ಲಿ ಕರಾವಳಿ ಗಡಿ ಉಲ್ಲಂಘನೆ ಮತ್ತು ನಿಷೇಧಿತ ಕೃತಕ ಬೆಳಕಿನ ಬಳಕೆ ಗಂಭೀರ ಅಪರಾಧವಾಗಿದ್ದು, ಇದರ ಆಧಾರದ ಮೇಲೆ ಅಧಿಕಾರಿಗಳು ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
Pic : AI capture
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









