ಹೊಸದಿಲ್ಲಿ : ಪ್ರಣಬ್ ಮುಖರ್ಜಿಯವರು ಬುಧವಾರ ಪೂರ್ವಾಹ್ನ 11.38ಕ್ಕೆ ಸರಿಯಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದೇಶದ 13 ನೇ ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಸುಪ್ರೀಮ್ ಕೋರ್ಟಿನ ಮೂಖ್ಯ ನ್ಯಾಯಧೀಶರಾದ ಎಸ್.ಎಚ್. ಕಪಾಡಿಯಾ ರವರು ಪ್ರಣ್ ಬ್ ಮುಖರ್ಜಿ ಯವರಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದಭ೯ದಲ್ಲಿ ಉಪರರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರದ ಸಚಿವರು, ವಿರೋದ ಪಕ್ಶದ ನಾಯಕರು, ಎಲ್ಲಾ ರಾಜ್ಯದ ಮುಖ್ಯಾಮಂತ್ರಿಗಳು ಹಾಗೂ ರಾಜ್ಯಪಾಲರು ಹಾಜರಿದ್ದರು.
ಮಾಮೂಲಿಯಾಗಿ ಸೂಟು ಅಥವಾ ಧೋತಿ ದಿರಿಸಿನಲ್ಲಿ ಕಾಣ ಸಿಗುವ ಮುಖರ್ಜಿ ಬುಧವಾರ ಕಪ್ಪು ಶೆರ್ವಾನಿ ಮತ್ತು ಬಿಳಿ ಪೈಜಾಮದಲ್ಲಿ ಕಂಗೊಳಿಸಿದರು. ಅನಂತರ ಅವರು ಮೊದಲು ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ನಮಸ್ಕರಿಸಿದರು. ನಂತರ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ನೂತನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಸಂಸತ್ ಭವನಕ್ಕೆ ಆಗಮಿಸಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು” ಹಸಿವು ದೇಶದ ಕಳವಳಕಾರಿ ವಿಶಯವಾಗಿದೆ. ಬಡವರೂ ಭಾರತದ ಭಾಗವೆಂಬ ಕಲ್ಪನೆ ನಮ್ಮಲ್ಲಿ ಬೆಳೆಯಬೇಕು ” ಎಂದರು. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು ಇದಕ್ಕೆ ಇನ್ನೂ ಹೆಚ್ಹಿನ ಒತ್ತು ನೀಡಬೇಕು ಎಂದರು.