ಬೆಂಗಳೂರು : ಗೊರಗುಂಟೆಪಾಳ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಯೊಬ್ಬರನ್ನು ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲು 8500 ರೂ. ವಸೂಲಿ ಮಾಡಿರುವ ಅತ್ಯಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು. ಖಾಸಗಿ ಅಂಬ್ಯುಲೆನ್ಸ್ ಗಳು ದುಬಾರಿ ದರ ವಿಧಿಸುತ್ತಿರುವುದನ್ನು ಈಗಾಗಲೇ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಂಬ್ಯುಲೆನ್ಸ್ ಸೇವೆಯನ್ನು ಕೆಪಿಎಂಇ ಕಾಯ್ದೆಯಡಿ ತರಲು ನಿರ್ಧರಿಸಲಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಖಾಸಗಿ ಅಂಬ್ಯುಲೆನ್ಸ್ ಗಳ ಗುಣಮಟ್ಟ ಹಾಗೂ ಶುಲ್ಕ ನಿಗದಿಗೆ ಆರೋಗ್ಯ ಇಲಾಖೆ ಅಗತ್ಯ ಮಾನದಂಡಗಳನ್ನು ರೂಪಿಸಲಿದೆ. ವ್ಯವಸ್ಥೆ ಸರಿದಾರಿಯಲ್ಲಿದ್ದಾಗ ಯಾವುದೇ ನಿರ್ಬಂಧದ ಅವಶ್ಯಕತೆ ಇರುವುದಿಲ್ಲ. ಆದರೆ ಲೋಪದೋಷಗಳು ಮಿತಿ ಮೀರಿದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದಿಂದ ಅಂಕುಶ ಹಾಕುವುದು ಅನಿವಾರ್ಯ. ಆರೋಗ್ಯ ಕ್ಷೇತ್ರದಲ್ಲಿ ಇಂದು ಖಾಸಗಿ ವಲಯ ಗುಣಮಟ್ಟದ ಸೇವೆಯನ್ನ ಒದಗಿಸುತ್ತಿದೆ ನಿಜ. ಆದರೆ, ಆರೋಗ್ಯ ಕ್ಷೇತ್ರವನ್ನ ಕೇವಲ ವ್ಯವಹಾರ ದೃಷ್ಟಿಕೋನದಿಂದ ನೋಡದೆ ಸೇವಾಮನೋಭಾವದಿಂದ ನೋಡಬೇಕು ಎಂದು ನಾನು ಮನವಿ ಮಾಡುತ್ತೇನೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









