ಮಂಗಳೂರು : ಕೆ ಎಸ್ ಆರ್ ಟಿಸಿ ನೌಕರರ ವೇತನ ಪರಿಷ್ಕರಣೆ , ಬಾಕಿ ಸಂಬಳ ಪಾವತಿ ಸೇರಿದಂತೆ ಹಲವು ಬೇಡಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ರಂದು ರಾಜ್ಯಾದ್ಯಂತ ನೌಕರರ ಬಂದ್ ಗೆ ಕರೆ ನೀಡಿದೆ.
ಮಂಗಳೂರು ವಿಭಾಗದಲ್ಲಿ ದಿನನಿತ್ಯದಂತೆ ಬಸ್ಗಳು ಸಂಚರಿಸುತ್ತಿವೆ. ಬಸ್ ಗಳು ವೇತನ ಪರಿಷ್ಕರಣೆ , ಬಾಕಿ ಸಂಬಳ ಪಾವತಿ ಬೇಡಿಕೆ ಮುಂದಿಟ್ಟು ಕರೆ ನೀಡಲಾಗಿರುವ ಕೆ ಎಸ್ ಆರ್ ಟಿಸಿ ನೌಕರರ ಬಂದ್ ಗೆ ಮಂಗಳೂರು ವಿಭಾಗದಲ್ಲಿ ಸೂಕ್ತ ಸ್ಪಂದನೆ ದೊರೆತಿಲ್ಲ ಎನ್ನಬಹುದು.
ಮಂಗಳೂರಿನ ಲಾಲ್ ಬಾಗ್ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಗಳು ಸಂಚರಿಸುತ್ತಿವೆ. ಅದೇ ರೀತಿ ಪ್ರಯಾಣಿಕರು ಸಹ ತಮ್ಮ ಊರಿನ ಬಸ್ ಗಾಗಿ ಕಾದು ಕುಳಿತಿದ್ದಾರೆ. ಬೇರೆ ಊರಿಗೆ ಹೋಲಿಸಿದರೆ ಮಂಗಳೂರಿನಲ್ಲಿ ದಿನನಿತ್ಯದ ಸಂಚಾರವೇ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









