ಮಂಗಳೂರು : ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ಜರಗುವ 74 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಉದ್ಘಾಟನೆ ಬುಧವಾರ ಶ್ರೀ ಸುಧೀರ್ , ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ , ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರ ಹಸ್ತಗಳಿಂದ ದೀಪ ಪ್ರಜ್ವಲನೆ ಮೂಲಕ ಪ್ರಾರಂಭಗೊಂಡಿತು . ಪ್ರಾರಂಭದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ , ಧ್ವಜಾರೋಹಣ , ವಂದೇಮಾತರಂ ಬಳಿಕ ಗಣಹೋಮ, ಮಹಾ ಪೂಜೆ ನೆರವೇರಿತು , ಸಾಯಂಕಾಲ ಸಭಾಕಾರ್ಯಕ್ರಮ ವಿವಿಧ ಸ್ಪರ್ದೆಗಳ್ಲಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು . ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ . ಹೆಚ್ ಯಸ್ . ಶೆಟ್ಟಿ ಆಗಿದ್ದರು ರಾತ್ರಿ ಮುಡ ಗಣಪತಿ ಸೇವೆ ಹಾಗೂ ರಂಗಪೂಜೆ ಸಹಸ್ರರಾರು ಭಜಕರ ಸಮ್ಮುಖದಲ್ಲಿ ನೆರವೇರಿತು .
ಗುರುವಾರ ಬೆಳಿಗ್ಗೆ ಭಂಡಾರಕೇರಿ ಮಠದ ಮಠಾಧೀಶರಾದ ಪರಮ ಪೂಜ್ಯ ವಿಧ್ಯೆಶ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಶ್ರೀದೇವರಿಗೆ ಮಂಗಳಾರತಿ ಬಳಿಕ ಆಶೀರ್ವಚನವಿತ್ತರು . ಈ ಸಂದರ್ಭದಲ್ಲಿ ಕೇಶವಸ್ಮ್ರತಿ ಸಂವರ್ಧನಾ ಸಮಿತಿಯ ಡಾ . ವಾಮನ್ ಶೆಣೈ , ವಿನೋದ್ ಶೆಣೈ , ರಘುವೀರ್ ಕಾಮತ್ , ಗಜಾನನ ಪೈ ಗಣೇಶೋತ್ಸವ ಸಮಿತಿಯ ಪ್ರವೀಣ್ ಕುಮಾರ್ , ಸುರೇಶ ವಿ . ಕಾಮತ್ , ಸ್ವಾಮಿ ಪ್ರಸಾದ್ , ಎಂ . ಸತೀಶ್ ಪ್ರಭು , ಬಾಲಕೃಷ್ಣ ಕೊಟ್ಟಾರಿ , ಜೆ ಕೆ ರಾವ್ , ಆನಂದ ಪಾಂಗಳ , ಕೆ ಪಿ ಟೈಲರ್ , ತರುಣ್ ಥಾಕರ್ , ಸ್ಮಿತಾ ಎಂ , ಯಸ್ ಆರ್ ಕುಡ್ವ , ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ , ಶಾಸಕರಾದ ಡಾ . ಭರತ್ ಶೆಟ್ಟಿ , ವೇದವ್ಯಾಸ್ ಕಾಮತ್ , ಪ್ರಮೋದ್ ಮಧ್ವರಾಜ್ ಮತ್ತು ಹಲವಾರು ಗಣ್ಯ ಪ್ರಮುಖರು ಉಪಸ್ಥಿತರಿದ್ದರು .
ಐದು ದಿನಗಳ ಪರ್ಯಂತ ಗಣೇಶೋತ್ಸವ ನಡೆಯಲಿದ್ದು ಪ್ರತಿ ದಿನ ದೇವರಿಗೆ ವಿಶೇಷ ಅಲಂಕಾರ , ಮಧ್ಯಾನಃ ಪೂಜೆ ರಾತ್ರಿ ಪೂಜೆ , ವಿವಿಧ ಖ್ಯಾತ ಕಲಾವಿದರಿಂದ ಸಂಗೀತ ಕಚೇರಿ , ಭಜನ್ ಸಂಧ್ಯಾ , ಭರತನಾಟ್ಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿರುವುದು , ಭಾನುವಾರ ಸಾಯಂಕಾಲ ವಿವಿಧ ವಾದ್ಯ ಘೋಷ್ಠಿ ಯೊಂದಿಗೆ ಅಲಂಕೃತ ಶ್ರೀ ದೇವರ ವಿಗ್ರಹದ ಶೋಭಾ ಯಾತ್ರೆ ನಡೆದು ಸಂಘನಿಕೇತನದಿಂದ ಹೊರಟು ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ವಿಸರ್ಜನೆ ಗೊಳ್ಳಲಿರುವುದು .
ಚಿತ್ರ : ಮಂಜು ನೀರೇಶ್ವಾಲ್ಯ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









