ಬೆಂಗಳೂರು :’ವರದನಾಯಕ’ ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ‘ವರದನಾಯಕ’ ಚಿತ್ರದ ಪೋಸ್ಟರುಗಳಲ್ಲಿ ಕಿಚ್ಹ ಸುದೀಪ್ ರವರೆ ರಾರಾಜಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ವರದನಾಯಕ’ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರಂಜೀವಿ ಸರ್ಜಾ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮೊದಲೇ ಚಿತ್ರ ಬಾಚಿಕೊಂಡಿದೆ. ಇಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಆದರೂ ಕಿಚ್ಹ ಸುದೀಪ್ ರವರೆ ಪೋಸ್ಟರ್ ಗಳಲ್ಲಿ ಮಿಂಚುತ್ತಿದ್ದಾರೆ.
‘ವರದನಾಯಕ’ ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ಹಾಗೂ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಹೆಸರಾಂತ ನಟಿ ಸಮೀರಾ ರೆಡ್ಡಿ ನಟಿಸಿದ್ದಾರೆ. ಆದರೆ ‘ವರದನಾಯಕ’ ಚಿತ್ರಕ್ಕೆ ಸುದೀಪ್ ಹಾಗೂ ಸಮೀರಾ ರೆಡ್ಡಿ ಅವರೇ ಪ್ರಚಾರ ಹಾಗೂ ಬಿಸಿನೆಸ್ ದೃಷ್ಟಿಯಿಂದ ಮುಖ್ಯ ಎಂಬುದು ಸತ್ಯ. ಸುದೀಪ್ ನಟಿಸಿರುವುದರಿಂದ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಸಾಕಷ್ಟು ಲಾಭವಾಗಿದೆ. ತೆಲುಗಿನ ‘ಲಕ್ಷ್ಯಂ’ ಚಿತ್ರದ ರಿಮೇಕ್ ಆಗಿರುವ ‘ವರದನಾಯಕ’ ನ.30ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಈಗಾಗಲೇ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಸುದೀಪ್ ಅವರನ್ನೇ ಪ್ರಚಾರದಲ್ಲಿ ಬಳಸಿಕೊಂಡು ಚಿತ್ರ ತೆರೆಗೆ ಬರುತ್ತಿದೆ, ಯಶಸ್ಸಿಗಾಗಿ ಕಾಯುತ್ತಿದೆ. ಬಿಡುಗಡೆಗೂ ಮೊದಲೇ ವರದನಾಯಕ ಚಿತ್ರ ಸುಮಾರು 11 ಕೋಟಿಗಳಷ್ಟು ಹಣವನ್ನು ಬಾಚಿಕೊಂಡಿದೆ. ಕಿಚ್ಚ ಸುದೀಪ್ ಅವರ ಖ್ಯಾತಿಯಿಂದಲೇ ಇಷ್ಟೊಂದು ಬೇಡಿಕೆ ‘ವರದನಾಯಕ’ನಿಗೆ ಸಿಕ್ಕಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
Click this button or press Ctrl+G to toggle between Kannada and English