ಮಂಗಳೂರು : ಮಂಗಳೂರಿನ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹೋತ್ಸವದ ಪ್ರಯುಕ್ತ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ. ಸಮಿತಿಯ ಅಧ್ಯಕ್ಷರಾಗಿ ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್ ಅವರು ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದು, ಗೌರವ ಅಧ್ಯಕ್ಷರಾಗಿ ಜೆ. ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಆಯ್ಕೆಯಾಗಿದ್ದಾರೆ. ಈ ಬಾರಿ ಉತ್ಸವವನ್ನು ವೈಭವಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಗೌರವ ಸಲಹೆಗಾರರು, ಮಹಿಳಾ ಕಾರ್ಯದರ್ಶಿಗಳು ಹಾಗೂ ವಿವಿಧ ಉಪಸಮಿತಿಗಳ ಸಂಚಾಲಕರನ್ನೊಳಗೊಂಡ ಒಟ್ಟು 148 ಸದಸ್ಯರ ಬೃಹತ್ ಕಾರ್ಯಾಚರಣೆ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ನಾಯಕತ್ವದ ಜವಾಬ್ದಾರಿಯನ್ನು ಹಂಚಿಕೊಳ್ಳಲು ಬಲವಾದ ಪದಾಧಿಕಾರಿಗಳ ತಂಡವನ್ನು ನೇಮಿಸಲಾಗಿದೆ. ಕಾರ್ಯಾಧ್ಯಕ್ಷರುಗಳಾಗಿ ಕಾರ್ಪೊರೇಟರ್ ಟಿ. ಪ್ರವೀಣ್ಚಂದ್ರ ಆಳ್ವ, ಬಜಾಲ್ನ ಉದಯ ಕೊಟ್ಟಾರಿ, ಲೈಯನ್ಸ್ ಶ್ರೀಧರ್ರಾಜ್ ಶೆಟ್ಟಿ ಕಡೆಕಾರ್, ಸುಧಾಕರ್ ಜೆ. ಕಂರ್ಬೆಟ್ಟು, ಲೈಯನ್ಸ್ ಗಣೇಶ್ ಶೆಟ್ಟಿ ಕಂರ್ಬುಕೆರೆ ಹಾಗೂ ಲೈಯನ್ಸ್ ಗಣೇಶ್ ಸಾಲಿಯಾನ್ ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ವಿ. ಅಡಪ್ಪ, ಮುಖ್ಯ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಶೆಟ್ಟಿ ಬೀದಿಮನೆ ಮತ್ತು ಕವಿತಾ ಗಂಗಾಧರ, ಹಾಗೂ ಪ್ರಧಾನ ಕೋಶಾಧಿಕಾರಿಯಾಗಿ ಶೈಲೇಶ್ ಭಂಡಾರಿ ತಾರ್ದೊಲ್ಯ ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷ ಸ್ಥಾನಗಳಿಗೆ ಮಾಜಿ ಕಾರ್ಪೊರೇಟರ್ ಜೆ. ಸುರೇಂದ್ರ, ನಾಗರಾಜ್ ಬಿ.ವಿ. ಕುಡ್ತಡ್ಕ, ಆಾಯಕರ ಇಲಾಖೆಯ ಜಯಂತ್ ಡಿ. ಗಟ್ಟಿ, ಶ್ರೀನಿವಾಸ್ ಕೆ. ಎಕ್ಕೂರು, ಸುನಿಲ್ ಪೂಜಾರಿ ತಂದೊಳಿಗೆ, ಅನಿಲ್ ಕೊಟ್ಟಾರಿ, ಕೆ.ಎಸ್.ಆರ್.ಟಿ.ಸಿಯ ಅಶೋಕ್ ರಾವ್, ಜೆ. ಶೇಖರ್ ಸನಿಲ್ ಕಂರ್ಬೆಟ್ಟು, ಪುಷ್ಪರಾಜ್ ಶೆಟ್ಟಿ ಕಂರ್ಬೆಟ್ಟು, ಶಿವರಾಜ್ ಬಿ. ಅಂಗಡಿಮಾರು, ಶ್ರೀ ಕೃಷ್ಣ ಶೆಟ್ಟಿ ಬಜೆಹಿತ್ಲು, ಅಶೋಕ ಕೋಟ್ಯಾನ್ ಕಂರ್ಬೆಟ್ಟು, ಶ್ರೀ ಗಣೇಶ್ ಆಚಾರ್ಯ, ಉಮೇಶ್ ಶೆಟ್ಟಿ ಕಂರ್ಬೆಟ್ಟು ಹಾಗೂ ಮಹಿಳಾ ಪ್ರತಿನಿಧಿಗಳಾಗಿ ಕವಿತಾ ಕೃಷ್ಣ ಶೆಟ್ಟಿ, ಅಮಿತಾ ಸೀತಾರಾಮ್, ವಿಜಯಾ ಉಜ್ಜೋಡಿ, ಶಾಂತಿ ಶೆಟ್ಟಿ, ಸುಮತಿ ಚಂದ್ರಶೇಖರ್, ಸುಲೋಚನಾ ಮೇಲಾಂಟ, ಪುಷ್ಪಾವತಿ ಮತ್ತು ಯಶವಂತಿ ರವೀಂದ್ರ ನಿಯೋಜನೆಗೊಂಡಿದ್ದಾರೆ.
ಆಡಳಿತಾತ್ಮಕ ಕಾರ್ಯಗಳಿಗೆ ಸಾಥ್ ನೀಡಲು ಜತೆ ಕಾರ್ಯದರ್ಶಿಗಳಾಗಿ ದೇವರಾಜ್ ಜಪ್ಪು, ಸಂತೋಷ್ ಕುಮಾರ್ ತಂದೊಳಿಗೆ, ಶೀತಲ್ ತಂದೊಳಿಗೆ ಹಾಗೂ ಜತೆ ಕೋಶಾಧಿಕಾರಿಗಳಾಗಿ ಚಂದ್ರಶೇಖರ ಕಿಲ್ಲೆ ಪಡುಹಿತ್ಲು ಮತ್ತು ದೀಪಿಕಾ ಕೇಶವ ಅಂಗಡಿಮಾರ್ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ವಿವಿಧ ವಿಭಾಗಗಳ ಪ್ರಧಾನ ಸಂಚಾಲಕರಾಗಿ ಜೆ. ಪ್ರಾಣೇಶ್ ರಾವ್, ಸೀತಾರಾಮ್, ಹರೀಶ್ ಶೆಟ್ಟಿ, ಹರ್ಬರ್ಟ್ ಡಿ’ಸೋಜಾ, ಚಂದ್ರಹಾಸ ಕುಲಾಲ್, ಎನ್. ಸುರೇಶ್ ಶೆಟ್ಟಿ, ಅಮರನಾಥ ಭಂಡಾರಿ, ಕೀರ್ತನ್ ಕುಮಾರ್, ಶಿವಾನಂದ ರಾವ್, ಗಣೇಶ್ ಪೂಜಾರಿ, ಯೋಗೀಶ್ ರೈ ಹಾಗೂ ಸುದೇಶ್ ಸನಿಲ್ ಅವರನ್ನು ಜವಾಬ್ದಾರಿಗೆ ನೇಮಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









