ಕಾಸರಗೋಡು: ಚಟ್ಟಂಚಾಲ್-ದೇಳಿ ರಸ್ತೆಯ ಬೆಂಡಿಚ್ಚಾಲ್ ಎಂಬಲ್ಲಿ ಅತೀ ವಿಚಿತ್ರವಾದ ರಸ್ತೆ ಅಪಘಾತವೊಂದು ಸಂಭವಿಸಿದೆ. ಆಟೋ ರಿಕ್ಷಾ ಚಲಾಯಿಸುತ್ತಿದ್ದ ಚಾಲಕರೊಬ್ಬರ ಹೆಗಲ ಮೇಲೆ ಗೂಬೆಯೊಂದು ಹಾರಿ ಬಂದು ಕುಳಿತುಕೊಂಡ ಕಾರಣ ಚಾಲಕನು ದಿಗ್ಭ್ರಮೆಗೊಂಡು ಆಟೋದ ನಿಯಂತ್ರಣ ಕಳೆದುಕೊಂಡಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಗಾಯಗೊಂಡ ಚಾಲಕ, ತಳಂಗರೆಯ ನಿವಾಸಿ ಯೂಸುಫ್ (50) ರವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೂಸುಫ್ ಅವರು ಬೆಂಡಿಚ್ಚಾಲ್ಗೆ ಬಾಡಿಗೆಗೆ ತೆರಳಿ ಕಾಸರಗೋಡಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಗೂಬೆ ದಿಢೀರನೆ ಹಾರಿ ಬಂದು ಕುಳಿತಿದ್ದರಿಂದ ಆದ ಗೊಂದಲದ ಪರಿಣಾಮವಾಗಿ ಈ ಅನಾಹುತ ಉಂಟಾಗಿದ್ದು, ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗವು ಗಂಭೀರವಾಗಿ ನಜ್ಜುಗುಜ್ಜಾಗಿದೆ.
ಎಐ ಕಲ್ಪಿತ ಚಿತ್ರ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









