ಮಂಗಳೂರು: ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಲಾದ ರಾಮನವಮಿ ಮಹೋತ್ಸವದ ಅಂಗವಾಗಿ ಉದ್ಘಾಟನಾ ಸಮಾರಂಭವು ಭವ್ಯವಾಗಿ ನೆರವೇರಿತು.
ಕಾರ್ಯಕ್ರಮವನ್ನು ಮಾಜಿ ಮಹಾಪೌರರಾದ ಶಶಿಧರ್ ಹೆಗ್ಡೆ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯಕ್, ಕಾರ್ಪೊರೇಟರ್ ಕೇಶವ ಮರೋಳಿ, ಹಾಗೂ ರಾಜೇಶ್ ದಾಸ್ , ಮಂದಿರದ ಆಡಳಿತ ಮೊಕ್ತೇಸರರಾದ ವಿಶ್ವಾಸ್ ಕುಮಾರ್ ದಾಸ್ , ಟ್ರಸ್ಟೀ ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಬಾಸ್ಕೆರ್ ಮೊಯಿಲಿ, ಹಾಗೂ ಕೊಲ್ಲೂರು ಮೂಕಾಂಬಿಕ ದೇವಾಸ್ಥಾನದ ಮೂಕ್ಥೇಶ್ವರದ ಡಾಕ್ಟರ್. ಅಭಿಲಾಷ್ ಹಾಗೂ ಸಾವಿರಾರು ಸಾಯಿ ಭಕ್ತರು ಎರಡು ದಿನದ ಶ್ರೀ ರಾಮನವಮಿ ಉತ್ಸವದಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿ ಸಾಯಿ ಬಾಬಾರ ಕ್ರಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಆಯೋಜಿಸಲಾದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಂದಿರದ ವತಿಯಿಂದ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಜನೆ, ಪೂಜೆ ಹಾಗೂ ಇತರ ಧಾರ್ಮಿಕ ವಿಧಿಗಳು ಭಕ್ತಿಭಾವದಿಂದ ನೆರವೇರಿದವು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









