ಬಂಟ್ವಾಳ : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಭರ್ಜರಿ ಜಯಭೇರಿ ಬಾರಿಸಿ, ಪೂರ್ಣಪ್ರಮಾಣದ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಬಿಸಿರೋಡಿನಲ್ಲಿ ಅದ್ಧೂರಿ ವಿಜಯೋತ್ಸವ ಆಚರಿಸಲಾಯಿತು. ಪಕ್ಷದ ಕಾರ್ಯಕರ್ತರು ಒಟ್ಟುಗೂಡಿ ಪಟಾಕಿ ಸಿಡಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು.
ಕಾರ್ಯಕ್ರಮದ ಉದ್ದಕ್ಕೂ ಬಿಜೆಪಿ ಪರವಾಗಿ ಮುಗಿಲು ಮುಟ್ಟುವ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಸಾರ್ವಜನಿಕರಿಗೆ ಸಿಹಿತಿಂಡಿ ಹಾಗೂ ಚರುಂಬುರಿ ವಿತರಿಸುವ ಮೂಲಕ ಚುನಾವಣಾ ಫಲಿತಾಂಶವನ್ನು ಸಂಭ್ರಮಿಸಿದರು. ಕೇಂದ್ರ ಮತ್ತು ರಾಜ್ಯ ನಾಯಕತ್ವದ ಅಭಿವೃದ್ಧಿ ಕಾರ್ಯಗಳಿಗೆ ಸಂದ ಜಯ ಇದಾಗಿದೆ ಎಂದು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಲಾಯಿತು.
ಈ ಸಂಭ್ರಮಾಚರಣೆಯಲ್ಲಿ ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ ಮತ್ತು ಶಿವಪ್ರಸಾದ್ ಶೆಟ್ಟಿ, ರಾಜ್ಯ ನಾಯಕಿ ಸುಲೋಚನ ಜಿ.ಕೆ. ಭಟ್ ಉಪಸ್ಥಿತರಿದ್ದರು. ಅಲ್ಲದೆ ಪ್ರಮುಖರಾದ ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ರಾಮದಾಸ್ ಬಂಟ್ವಾಳ, ಪುರುಷೋತ್ತಮ ಶೆಟ್ಟಿ ವಾಮದಪದವು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಉತ್ಸವದಲ್ಲಿ ಮೋನಪ್ಪ ದೇವಶ್ಯ, ಪ್ರಭಾಕರ್ ಪ್ರಭು, ದಿನೇಶ್ ಶೆಟ್ಟಿ ದಂಬೆದಾರ್, ಗಣೇಶ್ ದಾಸ್, ಪ್ರಣಾಮ್ ಅಜ್ಜಿಬೆಟ್ಟು, ಮಹೇಶ್ ಶೆಟ್ಟಿ, ಭಾಸ್ಕರ ಟೈಲರ್, ಕಾರ್ತಿಕ್ ಬಲ್ಲಾಳ್, ಸದಾನಂದ ಹಳೆಗೇಟು, ಕೇಶವ ದೈಪಲ, ಮನೋಜ್ ಕಳ್ಳಿಗೆ, ಪ್ರೇಮನಾಥ ಶೆಟ್ಟಿ, ಸುನಿಲ್ ರೋಡ್ರಿಗಸ್ ಹಾಗೂ ಎಲಿಯಾಸ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡು ವಿಜಯದ ನಗೆ ಬೀರಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









