ಮಂಗಳೂರು : ಸಂಡೆ ಬಜಾರ್ ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸುವ ಹುನ್ನಾರವನ್ನು ಖಂಡಿಸಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಪುರಭವನದ ಬಳಿಯೇ ಸಂಡೆ ಬಜಾರ್ ವ್ಯಾಪಾರಕ್ಕೆ ಅವಕಾಶ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಸಂಡೆ ಬಜಾರ್ ದೇಶದ ಎಲ್ಲಾ ನಗರದಲ್ಲೂ ಇದೆ ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಬೀದಿಬದಿ ವ್ಯಾಪಾರಿಗಳನ್ನು ಕ್ರಿಮಿನಲ್ ಗಳಂತೆ ಬಿಂಬಿಸಿ ಹುನ್ನಾರವನ್ನು ಬೀದಿ ವ್ಯಾಪಾರಿಗಳು ಐಕ್ಯತೆಯಿಂದ ಹೋರಾಡಿ ಸೋಲಿಸಲಿದ್ದಾರೆ ಎಂದು ಅವರು ಹೇಳಿದರು.
ಪರ್ಯಾಯ ವ್ಯವಸ್ಥೆ ಆಗುವವರೆಗೆ ಪುರಭವನದ ಬಳಿ ಸಂಡೆ ಬಜಾರಿಗೆ ಮುಕ್ತ ಅವಕಾಶ ನೀಡಬೇಕು ಯಾರದೋ ಒತ್ತಡಕ್ಕೆ ಮಣಿದು ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮಾತನಾಡಿ ಸಂಡೆ ಬಜಾರ್ ವ್ಯಾಪಾರದಲ್ಲಿ ಕೇವಲ ವ್ಯಾಪಾರಿಗಳ ಹಿತಾಸಕ್ತಿ ಮಾತ್ರವಲ್ಲ ಗ್ರಾಹಕರ ಹಿತಾಸಕ್ತಿಯನ್ನು ಪರಿಗಣಿಸಬೇಕು.
ಅಧಿಕಾರಿಗಳು ಬೀದಿಬದಿ ವ್ಯಾಪಾರದ ಕಾನೂನಿನ ಪ್ರಕಾರ ಕೆಲಸ ಮಾಡಬೇಕೆ ಹೊರತು ಯಾರದೋ ಬಾಹ್ಯ ಶಕ್ತಿಗಳ ಒತ್ತಡಕ್ಕೆ ಸಿಲುಕಿ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.
ಪ್ರತಿಭಟನೆಗೂ ಮುನ್ನ ಬಲ್ಲಾಳಭಾಗ್ ವೃತ್ತದಿಂದ ನಗರಪಾಲಿಕೆ ಕಚೇರಿ ವರೆಗೆ ಮೆರವಣಿಗೆ ನಡೆಯಿತು.
ನಗರಪಾಲಿಕೆ ಉಪ ಆಯುಕ್ತರಾ ಸ್ವಾಮಿ ಎ. ಎಲ್ ಮನವಿ ಸ್ವೀಕರಿಸಿ, ಬೀದಿಬದಿ ವ್ಯಾಪಾರಿಗಳ ಅಹವಾಲು ಆಲಿಸಿದರು. ಬರ್ಕೆ ಪೊಲೀಸರು ಸೂಕ್ತ ಬಂದೋಬಸ್ತ್ ನಡೆಸಿದ್ದರು
ಸಂಘದ ಅಧ್ಯಕ್ಷರಾದ ಮುಜಾಫರ್ ಅಹ್ಮದ್, ಉಪಾಧ್ಯಕ್ಷರಾದ ಹಸನ್ ಕುದ್ರೋಳಿ, ಎಂ. ಎನ್ ಶಿವಪ್ಪ, ಅಬ್ದುಲ್ ಖಾದರ್, ಪ್ರಮುಖರಾದ ಹಂಝ ಮೊಹಮ್ಮದ್, ವಿಜಯ್ ಜೈನ್, ಸಿಕಂದರ್ ಬೇಗ್, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ, ಮೇಬಲ್ ಡಿಸೋಜಾ, ದೊರೆಸ್ವಾಮಿ,ಫಿಲೋಮಿನ ಡಿಸೋಜಾ,ಸ್ಟೇನಿ ಡಿಸೋಜಾ,ಎಂ. ಎಸ್ ಮೊಯಿದಿನ್,ರಫೀಕ್, ಗದಿಗಪ್ಪ,ಸಯ್ಯದ್ ಸಾದಿಕ್, ಶಿವಾನಂದ, ಲಕ್ಕಮ್ಮ, ಸೆಲ್ವರಾಜ್, ಖಾಜಾ ಮೋಹಿಯುದ್ದಿನ್, ಜಗದೀಶ್ ಪೂಜಾರಿ, ಗುಡ್ಡಪ್ಪ, ತಯ್ಯುಬ್ ಬೆಂಗ್ರೆ, ಮನೋಜ್ ಊರ್ವಸ್ಟೋರ್, ಜಗದೀಶ್ ಬಜಾಲ್, ಚಂದ್ರಶೇಖರ ರಾವ್,ಮುತ್ತುರಾಜ್,ಸಾಬುದ್ದಿನ್, ಮುಂತಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









