ಉಳ್ಳಾಲ : ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆದಿತ್ಯವಾರ ತೌಡುಗೋಳಿ ಶ್ರೀ ದುರ್ಗಾಬಾಲಗೋಕುಲದಲ್ಲಿ ಮಕ್ಕಳ ನೇತೃತ್ವದಲ್ಲೇ ಅತ್ಯಂತ ಯಶಸ್ವಿ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಪುಟಾಣಿ ಲಿಖಿತ್ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಮತ್ತೊಬ್ಬ ವಿದ್ಯಾರ್ಥಿನಿ ಆದಿರಾ ಪ್ರೀತಿಯ ಸ್ವಾಗತ ಭಾಷಣದ ಮೂಲಕ ಅತಿಥಿ ಗಣ್ಯರನ್ನು ಸಭೆಗೆ ಬರಮಾಡಿಕೊಂಡಳು. ಇದೇ ವೇಳೆ ಧನ್ಯಾ ಯೋಗದ ಮಹತ್ವ ಮತ್ತು ಅದರ ಪ್ರಯೋಜನಗಳ ಕುರಿತು ಮನಮುಟ್ಟುವಂತೆ ಮಾತನಾಡಿದಳು.
ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿ ಇಳಾ ಮಾತಾಶ್ರೀ ಅವರು ನೆರೆದಿದ್ದ ಮಕ್ಕಳಿಗೆ ಸೂರ್ಯನಮಸ್ಕಾರದ ತರಬೇತಿ ನೀಡಿ, ಪ್ರಾಯೋಗಿಕವಾಗಿ ಮಾಡಿಸಿದರು. ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಉದಯ ಶಂಕರ್ ಹಾಗೂ ಅವರ ಪುತ್ರಿ ಡಾ. ಸೌರಭ ಅವರು ಮಕ್ಕಳೊಂದಿಗೆ ತಾವೂ ಸೂರ್ಯನಮಸ್ಕಾರವನ್ನು ಮಾಡುವ ಮೂಲಕ ಮಕ್ಕಳಲ್ಲಿ ಸಕಾರಾತ್ಮಕ ಉತ್ಸಾಹ ತುಂಬಿದರು. ಯೋಗದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ತೌಡುಗೋಳಿ ಶ್ರೀ ದುರ್ಗಾಬಾಲಗೋಕುಲದ ವಿದ್ಯಾರ್ಥಿ ಲಿಖಿತ್, ತನಗೆ ಸಿದ್ದಿಸಿರುವ ಕಠಿಣವಾದ ‘ಗರ್ಭಾಸನ’ವನ್ನು ವೇದಿಕೆಯ ಮೇಲೆ ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾದನು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಧನ್ಯಾ ಬಂದಿದ್ದ ಎಲ್ಲಾ ಗಣ್ಯರಿಗೂ ಹಾಗೂ ಪೋಷಕರಿಗೂ ಕೃತಜ್ಞತೆ ಸಲ್ಲಿಸಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದಳು. ಇದೇ ಶುಭ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿ ನಿಹಾನ್ನ ಹುಟ್ಟುಹಬ್ಬದ ಆಚರಣೆಯೂ ನಡೆದಿದ್ದು, ನೆರೆದಿದ್ದ ಮಕ್ಕಳಿಗೆ ಸಿಹಿ ಹಾಗೂ ಫಲಾಹಾರವನ್ನು ವಿತರಿಸಲಾಯಿತು.
ಈ ಯೋಗೋತ್ಸವದಲ್ಲಿ ನಂದಿನಿ ಮಾತಾಶ್ರೀ, ಇಳಾ ಮಾತಾಜಿ, ಉದಯ್ ಕುಂಜತ್ತೂರ್, ಲಲಿತಾ, ಶಿವರಾಜ್, ರಮೇಶ್, ತಿಲಕ್ ಹಾಗೂ ಅತಿಥಿಗಳ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









