ಬೆಂಗಳೂರು : ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇತ್ತೀಚೆಗೆ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ನೃತ್ಯ ಕಲಾ ವೈಭವ – 2026’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಡುಗೋಡಿನ ನೃತ್ಯ ಕಲಾವಿದರಾದ ಪ್ರತೀಕ್ಷಾ ಅನಿಲ್ ಹಾಗೂ ಸುಭೀಕ್ಷಾ ಅನಿಲ್ ಸಹೋದರಿಯರು ಜಂಟಿಯಾಗಿ ದೊಡ್ಡ ಸಾಧನೆ ಮಾಡಿದ್ದಾರೆ. ಭರತನಾಟ್ಯ ಕ್ಷೇತ್ರದಲ್ಲಿ ಈ ಅಕ್ಕ-ತಂಗಿಯರ ಅಪೂರ್ವ ನೃತ್ಯ ಪ್ರತಿಭೆ ಮತ್ತು ಕಲಾಸೇವೆಯನ್ನು ಪರಿಗಣಿಸಿ, ಗಣ್ಯರ ಸಮ್ಮುಖದಲ್ಲಿ ಇವರಿಗೆ ಪ್ರತಿಷ್ಠಿತ ‘ರಾಷ್ಟ್ರೀಯ ಕಲಾ ರತ್ನ’ ಹಾಗೂ ‘ರಾಷ್ಟ್ರೀಯ ಕಲಾಚೇತನ’ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ರಾಜ್ಯ ಸಾಂಸ್ಕೃತಿಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಡಾ. ಜಯಸಿಂಹ ಎಸ್. ಅವರು ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಪತ್ರಕರ್ತರ ವೇದಿಕೆಯ ಅಧ್ಯಕ್ಷರಾದ ಮಹೇಶ್ ಬಾಬು ಸರ್ವೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ವೀಣಾ ಕಿಡಿದಾಳ ಹಾಗೂ ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುರೇಶ್ ವಾಗ್ಮಡ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಪ್ರಶಸ್ತಿ ವಿಜೇತ ಕಲಾವಿದರನ್ನು ಅಭಿನಂದಿಸಿದರು. ಪ್ರಶಸ್ತಿ ಮುಡಿಗೇರಿಸಿಕೊಂಡ ಈ ಸಹೋದರಿಯರು ಮುಂಡುಗೋಡಿನ ‘ನಾಟ್ಯ ಮಯೂರಿ ನೃತ್ಯ ಕಲಾ ಕೇಂದ್ರ’ದ ವಿದುಷಿ ಶ್ರೀಮತಿ ಶಶಿರೇಖಾ ಬೈಜು ಅವರ ಪ್ರೀತಿಯ ಶಿಷ್ಯೆಯರಾಗಿದ್ದಾರೆ.
ಇವರು ತೌಡುಗೋಳಿ ಶ್ರೀ ಗೋವಿಂದಗುರುಸ್ವಾಮಿಯವರ ಮೊಮ್ಮಕ್ಕಳು ಮತ್ತು ಶ್ರೀ ದುರ್ಗಾಬಾಲ ಗೋಕುಲದ ವಿದ್ಯಾರ್ಥಿಗಳಾಗಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










