ಮಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವು ಭಾನುವಾರ ರಾತ್ರಿ ಆಕರ್ಷಕ ಗುಲಾಬಿ (ಪಿಂಕ್) ಬಣ್ಣದ ಬೆಳಕಿನಿಂದ ಮಿಂದೆದ್ದಿತು.
ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ನೀಡುವ ಮೂಲಕ ಮಹಿಳೆಯರ ಆರ್ಥಿಕ ಸಶಕ್ತೀಕರಣ ಮತ್ತು ಸ್ವಾವಲಂಬನೆಗೆ ಆಸರೆಯಾಗಿರುವ ಈ ಮಹತ್ವದ ಯೋಜನೆ ಜಾರಿಯಾಗಿ ಆಗಸ್ಟ್ 30ಕ್ಕೆ ಮೂರು ವರ್ಷಗಳು ಭರ್ತಿಯಾಗಿವೆ. ಈ ಸಾಧನೆಯ ಸವಿನೆನಪಿಗಾಗಿ ಹಾಗೂ ಮಹಿಳಾ ಸಾಮರ್ಥ್ಯದ ಸಂಕೇತವಾಗಿ ಇಡೀ ಕಟ್ಟಡಕ್ಕೆ ಗುಲಾಬಿ ವರ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಈ ಜನಪ್ರಿಯ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ ಸುಮಾರು 1.20 ಕೋಟಿ ಫಲಾನುಭವಿ ಮಹಿಳೆಯರ ನೇರ ಖಾತೆಗೆ 76,500 ಕೋಟಿಗೂ ಅಧಿಕ ಹಣವನ್ನು ಜಮೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಈ ವಿಶೇಷ ದೀಪಾಲಂಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









