ಮಂಗಳೂರು : ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ನ ಆಶ್ರಯದಲ್ಲಿ79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸಂಭ್ರಮದ ಚಾಲನೆ ದೊರೆತಿದೆ. ಈ ಸುಸಂದರ್ಭದಲ್ಲಿ ಶ್ರೀ ದೇವರ ಮೃತ್ತಿಕಾ ವಿಗ್ರಹದ ವೈಭವದ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು. ದಿವಂಗತ ಮೋಹನ್ ರಾವ್ ಅವರ ನಿವಾಸದಲ್ಲಿ ವಿಶೇಷವಾಗಿ ಸಿದ್ಧಗೊಂಡಿದ್ದ ಗಣೇಶ ಮೂರ್ತಿಯನ್ನು ಶ್ರೀ ವೆಂಕಟರಮಣ ದೇವಸ್ಥಾನ (ರಥಬೀದಿ) ಭಕ್ತಾದಿಗಳು ಹಾಗೂ ಸ್ವಯಂಸೇವಕರು ಭುಜ ಸೇವೆಯ ಮೂಲಕ ಸಂಘನಿಕೇತನಕ್ಕೆ ತಂದಿರಿಸಿದರು. ಮುಂದಿನ ಐದು ದಿನಗಳ ಕಾಲ ವಿಭಿನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಉತ್ಸವವು ಕಳೆಗಟ್ಟಲಿದೆ.
ಈ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ ಡಾ. ಸತೀಶ್ ರಾವ್ ಮತ್ತು ವಿಭಾಗ ಪ್ರಚಾರಕ ಶ್ರೀ ಸುರೇಶ್ ಜಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಉಪಾಧ್ಯಕ್ಷ ಶ್ರೀ ಕೆ. ರಘುವೀರ್ ಕಾಮತ್, ಕಾರ್ಯದರ್ಶಿ ಗಜಾನನ ಪೈ ಹಾಗೂ ಸೇವಾ ಭಾರತಿಯ ಪ್ರಮುಖರಾದ ವಿನೋದ್ ಶೆಣೈ ಸೇರಿದಂತೆ ಹಲವು ಗಣ್ಯರು ಮೆರವಣಿಗೆಗೆ ಸಾಕ್ಷಿಯಾದರು.
ಅಲ್ಲದೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಆನಂದ ಪಾಂಗಳ, ಶ್ರೀ ಕೆ. ಪದ್ಮನಾಭ, ಸ್ಮಿತಾ ಎಂ, ಪ್ರಧಾನ ಕಾರ್ಯದರ್ಶಿ ಶ್ರೀ ಜಿ. ಸುರೇಶ್ ವಿ. ಕಾಮತ್, ಕೋಶಾಧಿಕಾರಿ ಶ್ರೀ ರಂಗನಾಥ್ ಹಾಗೂ ಜೊತೆ ಕಾರ್ಯದರ್ಶಿಗಳಾದ ನಂದನ್ ಮಲ್ಯ, ಜೀವನರಾಜ್ ಶೆಣೈ, ಗಣೇಶ್ ಪ್ರಸಾದ್, ಪೂರ್ಣಿಮಾ ಶೆಣೈ ಈ ಧಾರ್ಮಿಕ ಸಂಭ್ರಮದಲ್ಲಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









