ಮಂಗಳೂರು : ಮಂಗಳೂರು ನಗರದ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗುರುರಾಜ್ ಭಟ್ ಅವರ ಮಾಲೀಕತ್ವದ ಗೋಶಾಲೆಯಲ್ಲಿ ‘ಸಾಮರಸ್ಯ ಮಂಗಳೂರು’ ಸಂಘಟನೆಯ ನೇತೃತ್ವದಲ್ಲಿ ಭಕ್ತಿಪೂರ್ವಕವಾಗಿ ಗೋಪೂಜ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಗೋಪೂಜೆ ಮಾಡುವುದರಿಂದ ಸಕಲ ಪಾಪ ಕರ್ಮಗಳು ನಾಶವಾಗುತ್ತವೆ ಹಾಗೂ ಗೋವಿಗೆ ಗ್ರಾಸ ನೀಡುವುದರಿಂದ ದೇವರಿಗೆ ಮಹಾನೈವೇದ್ಯ ಅರ್ಪಿಸಿದಷ್ಟೇ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಸಾಮರಸ್ಯ ಮಂಗಳೂರು ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ನಾಯಕ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಯೋಗೀಶ್ ನಾಯಕ್, ಸಮರ್ಥ್ ಭಟ್, ಸಿತಾರಾ, ರಾಧಿಕಾ ನಾಯಕ್, ನೀತ್ ಶರಣ್, ರಾಜೇಶ್ ದೇವಾಡಿಗ, ಟಿಸಿ ಗಣೇಶ್, ಸೀತಾರಾಮ್ ಶೆಟ್ಟಿ, ಸುನಿತಾ, ಸುನಂದಾ, ಮಾತಾಜಿ, ರತಿಕಾ, ರಚಿತಾ, ಪುಷ್ಪ ಆರ್ ಶೆಟ್ಟಿ, ರುಕ್ಮಿಣಿ, ಮೀರಾ ದೇವಿ, ಗಟು ಕವನ್ ಹಾಗೂ ಮೋಹನ್ ಕವನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಪೂಜೆಯಲ್ಲಿ ಭಾಗವಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









