ಮಂಗಳೂರು : ನಗರದ ಖ್ಯಾತ ಸಿವಿಲ್ ಇಂಜಿನಿಯರ್ ಮತ್ತು ತಾಂತ್ರಿಕ ಶಿಕ್ಷಣ ತಜ್ಞರಾದ ಪ್ರೋ|| ಈಆರ್. ಗುತ್ತು ರಘುನಾಥ್ ರೈ (95) ರವರು ವಯೋಸಹಜ ಕಾರಣದಿಂದ ತಮ್ಮ ಪುತ್ರ ಡಾ. ಹರಿದಾಸ್ ರೈರವರ ಪಾಂಡೇಶ್ವರ ನಿವಾಸದಲ್ಲಿ ತಾ. 02.07.2025 ರಂದು ನಿಧನರಾದರು.
ತಮಿಳುನಾಡಿನ ಗಿಂಡಿ ಇಂಜಿನಿಯರಿAಗ್ ಮಹಾವಿಧ್ಯಾಲಯದಲ್ಲಿB.E. ಮತ್ತು ಸ್ನಾತಕ್ಕೋತ್ತರ M.Tech ಪದವಿ ಪಡೆದು ತಮ್ಮ ವೃತ್ತಿ ಜೀವನವನ್ನು ತಮಿಳುನಾಡಿನ ಚೆನೈ ನಗರದ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮಣಿಪಾಲದ M.I.T. ಕಾಲೇಜಿನಲ್ಲಿ ಪ್ರಾಧ್ಯಾಪಕರಾರಿ ನಿಯುಕ್ತಿಗೊಂಡರು. ಬಳಿಕ N.M.A.I.T, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡರು. ಬಳಿಕ ಸ್ಥಾಪನಾ ಪ್ರಾಂಶುಪಾಲರಾಗಿ ಪುತ್ತೂರು ನಗರದ ವಿವೇಕಾನಂದ ಇಂಜಿನಿಯರಿಂಗ್ಕಾ ಲೇಜಿನಲ್ಲಿ ಸೇವೆ ಸಲ್ಲಿಸಿದರು. ಬಳಿಕ ನಗರದ ಹೊರವಲಯದಲ್ಲಿ ಕಾರ್ಯಚರಿಸುವ M.I.T.E ಇಂಜಿನಿಯರಿಂಗ್ ಶೈಕ್ಷಣಿಕ ಸಂಸ್ಥೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ತಾಂತ್ರಿಕ ಶಿಕ್ಷಣದಿಂದ ನಿವೃತ್ತಿ ಪಡೆದ ಬಳಿಕ ಹಲವಾರು ಸಮಾಜ ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಶೇಷವಾಗಿ ಉಪಾದ್ಯಕ್ಷ, ಭಾರತೀಯ ವಿದ್ಯಾಭವನ, ಮಂಗಳೂರು, ಯಕ್ಷಗಾನ ಕಲೆ, ಸಾಹಿತ್ಯ, ಲೇಖಕರಾಗಿ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ರೋಟರಿ ಸಂಸ್ಥೆ, ಮಣಿಪಾಲ, ರೋಟರಿ ಸಂಸ್ಥೆ, ನಿಟ್ಟೆಯಲ್ಲಿ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರೋಟರಿ ಜಿಲ್ಲಾ 3180 ರ ಜಿಲ್ಲಾ ಕಾರ್ಯದರ್ಶಿಯಾಗಿ 3 ವರ್ಷ ಸೇವೆ ಸಲ್ಲಿಸಿದ್ದರು. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್, ಮಂಗಳೂರು ಶಾಖೆಯ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು.
ಅವರ ಪುತ್ರರಾದ ಡಾ. ದೇವದಾಸ್ ರೈ, ಡಾ. ಹರಿದಾಸ್ ರೈ, ಸೊಸೆಯವರಾದ ಶ್ರೀಮತಿ ವಿನಯ ರಾಮ್ದಾಸ್ ರೈ, ಡಾ. ಸುಪ್ರಿಯ ರೈ, ಶ್ರೀಮತಿ ಸೀಮಾ ರೈ ಹಾಗೂ ಮೊಮ್ಮಕ್ಕಳಾದ ಡಾ. ಅವಿನಾಶ್ ರೈ, ಕುಮಾರಿ ಹೀರಾ, ರನಜೋಯ್ ಹಾಗೂ ಕುಟುಂಬಸ್ಥರು, ಅಭಿಮಾನಿಗಳು, ವಿಧ್ಯಾರ್ಥಿಗಳು, ಬಂಧು ಮಿತ್ರರು ಮತ್ತು ಹಿತೈಶಿಗಳನ್ನು ಅಗಲಿದ್ದಾರೆ.
ನಗರದ ಗಣ್ಯ ವ್ಯಕ್ತಿಗಳು, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ವೈದ್ಯರು, ಇಂಜಿನಿಯರ್ಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು