ತನ್ನ ತಂದೆ-ತಾಯಿಯನ್ನು ಹುಡುಕಿ, ಅವರನ್ನು ಒಟ್ಟು ಸೇರಿಸಿ ಅವರ ಹೊಟ್ಟೆಯಲ್ಲಿ ಹುಟ್ಟುವ ಕನಸು ಕಂಡ ಆತ್ಮವೊಂದು ನಾಲ್ಕೇ ನಾಲ್ಕು ದಿನದ ಭೂಮಿಗೆ ಬಂದು ಅಮಾಯಕನೊಬ್ಬನ ದೇಹ ಹೊಕ್ಕಿರುತ್ತದೆ. ಆತ್ಮ, ದೆವ್ವ, ಪುನರ್ಜನ್ಮದ ಕಥೆಗಳ ನಡುವೆ ತುಂಬಾ ಭಿನ್ನವಾಗಿ ನಿಲ್ಲುವ ಸಿನಿಮಾ “ಎಕ್ಸ್ ಆ್ಯಂಡ್ ವೈ’. ನಿರ್ದೇಶಕ ಸತ್ಯಪ್ರಕಾಶ್ ಒಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿ ಅದನ್ನು ತುಂಬಾ ಸುಂದರವಾಗಿ ನಿರ್ಮಿಸಿದ್ದಾರೆ .
ಚಿತ್ರವು ಹಲವು ಸನ್ನಿವೇಶಗಳ ಮೂಲಕ ಚಿತ್ರ ಪ್ರೇಕ್ಷಕರಿಗೆ ಮನ ಮುಟ್ಟುತ್ತದೆ. ನಿರ್ದೇಶಕ ಸತ್ಯ ಪ್ರಕಾಶ್ ಆತ್ಮವೊಂದು ಈಗಾಗಲೇ ಹುಟ್ಟಿರುವವರ ಜೀವನದ ಜಂಜಾಟಗಳನ್ನು ನೋಡಲು ಶುರು ಮಾಡಿದರೆ ಹೇಗಿರುತ್ತದೆ. ಅದು ಗಂಭೀರವಾದ ಜೀವನ ದರ್ಶನ. ಈ ಮೂಲಕ ಒಂದು ಸಂದೇಶವನ್ನು ನೀಡಿದ್ದಾರೆ.
ಸಿನೆಮಾದಲ್ಲಿ ಅನಾಥಶ್ರಮ, ವೃದ್ಧಾಶ್ರಮ, ಜಾತಿ, ಜಾತಕ.. ಹೀಗೆ ಹಲವು ವಿಚಾರಗಳು ಬರುತ್ತವೆ. ಇವೆಲ್ಲವೂ ಜೀವನದ ಮೌಲ್ಯಗಳನ್ನು ಅರ್ಥಮಾಡಿಸುವ ಪ್ರಯತ್ನ ಮಾಡಿರುವುದು ಕಾಣುತ್ತದೆ. ಮನರಂಜನೆಯ ಜೊತೆಗೆ ಜೀವನ ಪಾಠವು ಸಿನಿಮಾದಲ್ಲಿದೆ.
ನಿರ್ದೇಶಕ ಸತ್ಯಪ್ರಕಾಶ್ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಬೃಂದಾ ಆಚಾರ್, ಪ್ರಕಾಶ್ ಅಥರ್ವ, ಸುಂದರ್ ವೀಣಾ, ಆಯನಾ, ದೊಡ್ಡಣ್ಣ, ವೀಣಾ ಸುಂದರ್, ಧರ್ಮಣ್ಣ ಕಡೂರುಊರಿಗೆಲ್ಲಾ ಸಹಾಯ ಮಾಡುವ ಕ್ರೀಡೆ ಎಂಬ ಸಾಮಾನ್ಯ ಮನುಷ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಅಪ್ಪ-ಅಮ್ಮನನ್ನು ಹುಡುಕಿಕೊಂಡು ಬರುವ ಅಮಾಯಕನಾಗಿ ಅಥರ್ವ ನಟಿಸಿದ್ದಾರೆ. ನಾಯಕಿ ಬೃಂದಾ ಆಚಾರ್ಯ ಅವರಿಗೂ ನಟನೆಗೆ ತಕ್ಕ ಪಾತ್ರ ಸಿಕ್ಕಿದೆ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಚಲನಚಿತ್ರ ವಿಮರ್ಶೆ, ವಿಮರ್ಶೆಗಳು