ಕರಾವಳಿಗರ ಅಚ್ಚುಮೆಚ್ಚಿನ ಖಾದ್ಯ ಮೀನು ಸಾರು. ಅದರಲ್ಲೂ ತುಳುನಾಡಿನಲ್ಲಿ ಮೀನು ಖಾದ್ಯ ಎಂದರೆ ತುಂಬಾ ಪ್ರಸಿದ್ದಿ, ಮೀನು ಕರಿ , ಮೀನು ಪ್ರೈ, ಮೀನು ಹುಳಿಮೆಣಸು ತುಂಬಾ ಜನಪ್ರಿಯ. ಅದನ್ನು ಸರಿಯಾದ ರೆಸಿಪಿಯೊಂದಿಗೆ ಮಾಡಿದರೆ ಎಂತವರ ಬಾಯಲ್ಲೂ ನೀರೂರದೆ ಇರದು.
ಮೀನು ಸಾರುಗೆ ಬೇಕಾಗುವ ಪದಾರ್ಥಗಳು: ಮೀನು – ಅರ್ಧ ಕೆಜಿ, ಹುಣಸೆಹಣ್ಣು – ನಿಂಬೆ ಹಣ್ಣು ಗಾತ್ರದಷ್ಟು, ಎಣ್ಣೆ – 2 ಟೀಸ್ಪೂನ್ , ಈರುಳ್ಳಿ – 2, ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್, ಸಣ್ಣಗೆ ಹೆಚ್ಚಿದ ಶುಂಠಿ – ಒಂದು ಇಂಚು, ಟೊಮೆಟೊ – 2, ತೆಂಗಿನ ತುರಿ – 1 ಕಪ್, ಹೆಚ್ಚಿದ ಹಸಿ ಮೆಣಸಿನಕಾಯಿ – 2, ಕೆಂಪು ಮೆಣಸಿನ ಪುಡಿ – ಖಾರಕ್ಕೆ ತಕ್ಕಷ್ಟು, ಕರಿಬೇವಿನ ಎಲೆ – ಕೆಲವು, ನೀರು – 1 ಕಪ್, ಉಪ್ಪು – ರುಚಿಗೆ ತಕ್ಕಷ್ಟು.
ಮೀನು ಪ್ರೈ ಮಾಡುವ ವಿಧಾನ: * ಮೊದಲಿಗೆ ಮೀನನ್ನು ಶುಚಿಗೊಳಿಸಿ, ಬಳಿಕ ಅದಕ್ಕೆ ಹುಣಸೆ ಹಣ್ಣಿನ ರಸ ಹಾಗೂ ಉಪ್ಪು ಹಾಕಿ ಅರ್ಧ ಗಂಟೆ ಪಕ್ಕಕ್ಕಿಡಿ. * ತೆಂಗಿನ ತುರಿಯನ್ನು ಮಿಕ್ಸರ್ ಜಾರ್ಗೆ ಹಾಕಿ ನೀರು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ. * ಈಗ ಮಣ್ಣಿನ ಮಡಕೆಯನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಕರಿಬೇವಿನ ಎಲೆ, ಶುಂಠಿ ಹಾಕಿ. * ನಂತರ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. * ಈಗ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಫ್ರೈ ಮಾಡಿ. ಬಳಿಕ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಫ್ರೈ ಮಾಡಿ. * ನಂತರ ರುಬ್ಬಿದ ತೆಂಗಿನ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಕುದಿಸಿ. * ಸಾರು ಕುದಿ ಬರುತ್ತಿದ್ದಂತೆಯೇ ಮೀನುಗಳನ್ನು ಹಾಕಿ ಬೇಯಿಸಿ. * ಮೀನು ಬೆಂದ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಉರಿಯನ್ನು ಆಫ್ ಮಾಡಿ. * ಇದೀಗ ಸಿಂಪಲ್ ವಿಧಾನದ ಮೀನು ಸಾರು ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಆಹಾರ ಮತ್ತು ಅಡುಗೆ