ಬೆಂಗಳೂರು : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿಗಳ ಪತ್ನಿ ಶ್ರೀಮತಿ ಪಾರ್ವತಿ ಹಾಗೂ ಬೈರತಿ ಸುರೇಶ್ ವಿರುದ್ಧಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳ ಮೂಲಕ ತಿರಸ್ಕರಿಸಿದೆ. ಇದು ನ್ಯಾಯಾಲಯದಲ್ಲಿ ಇಡಿಗೆ ಆದ ಹಿನ್ನಡೆ ಎಂದು ಭಾವಿಸುವುದಕ್ಕಿಂತ ಕೇಂದ್ರ ಸರ್ಕಾರಕ್ಕೆ ಬಿದ್ದ ಕಪಾಳಮೋಕ್ಷ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ‘ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಿಕೊಳ್ಳಬೇಕೆ ಹೊರತು, ಇಡಿಯಂತಹ ಸಾಂವಿಧಾನಿಕ ಸಂಸ್ಥೆಗಳನಲ್ಲ,’ ಎಂದು ಇಡಿಪರ ವಕೀಲರಿಗೆ ಹೇಳಿದೆ. ಇದು ನೇರವಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಬೀಸಿರುವ ಛಾಟಿ ಏಟು.
ಸುಪ್ರೀಂ ಅಭಿಪ್ರಾಯದ ಬಳಿಕವಾದರೂ ನರೇಂದ್ರ ಮೋದಿಯವರು ಯವರು ಸಾಂವಿಧಾನಿಕ ಮೌಲ್ಯ ಅರಿಯಲಿ, ಪ್ರಜಾಪ್ರಭುತ್ವದ ಘನತೆ ತಿಳಿಯಲಿ. ಸರ್ವಾಧಿಕಾರಿಯಂತೆ ವರ್ತಿಸಿದರೆ ಈ ರೀತಿಯ ತಪರಾಕಿಗಳು ಬೀಳುತ್ತಲೆ ಇರುತ್ತವೆ ಎಂಬುದು ಇಂದು ಸುಪ್ರೀಂ ತೀರ್ಪಿನಿಂದ ಸಾಬೀತಾಗಿದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರ ಯಾವುದೇ ಪಾತ್ರವಿಲ್ಲದಿದ್ದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರಿಗೆ ಕಳಂಕ ತರುವ ದುಷ್ಟ ಯತ್ನ ನಡೆಯಿತು. ಇಡಿ ಕೂಡ ಈ ದುಷ್ಟಕೂಟದ ಭಾಗವಾಗಿದ್ದು ವಿಪರ್ಯಾಸ. ಆದರೆ ಸುಪ್ರೀಂನ ತೀರ್ಪು ಈ ದುಷ್ಟಕೂಟಗಳಿಗೆ ನೈತಿಕತೆಯ ಪಾಠ ಕಲಿಸಿದಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜಕೀಯ, ಟಾಪ್ ಸುದ್ದಿ, ಸುದ್ದಿಗಳು









