ಮಂಗಳೂರು : ಅಶ್ರಫ್ ಕಲಾಯಿ ಹಾಗೂ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಹಿಂದೂ ಸಂಘಟನೆಯ ಮುಖಂಡನಾದ ಭರತ್ ಕುಮ್ಡೇಲು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
2017 ರ ಕಲಾಯಿ ಅಶ್ರಫ್ ಕೊಲೆಯ ಪ್ರಮುಖ ಆರೋಪಿ ಭರತ್ ಕುಮ್ಡೇಲ್, ಸುಮಾರು ಎಂಟು ವರ್ಷಗಳ ಕಾಲ ಕಳೆದ ನಂತರ ಗುರುವಾರ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ .
ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವುದರ ನಡುವೆಯೇ ಭರತ್ ಕುಮ್ಡೇಲು 3–4 ತಿಂಗಳಿಂದ ನ್ಯಾಯಾಲಯಕ್ಕೆ ಗೈರಾಗಿದ್ದ. ನಿರಂತರ ಗೈರಿನಿಂದ ನ್ಯಾಯಾಲಯವು ಅವರ ವಿರುದ್ಧ ನಿರ್ಬಂಧಿತ ವಾರೆಂಟ್ ಹೊರಡಿಸಿತ್ತು. ಅದೇ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿಯೂ ತಲೆಮರೆಸಿಕೊಂಡಿರುವ ಕಾರಣ, ಪೊಲೀಸ್ ಇಲಾಖೆ ಭರತ್ ವಿರುದ್ಧ ಕೋಕಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡಿತ್ತು. ಈ ಎಲ್ಲ ಕಾನೂನು ಪ್ರಕ್ರಿಯೆಗಳ ಒತ್ತಡದ ನಡುವೆಯೇ ಭರತ್ ಅವರು ಕೊನೆಗೆ ಕೋರ್ಟ್ಗೆ ಶರಣಾಗಿದ್ದಾರೆ .
ಬಂಟ್ವಾಳ ತಾಲೂಕಿನ ನಿವಾಸಿ ಕುಮ್ಡೇಲ್, ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಸಂಖ್ಯೆ 169/2017 ರಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದರು. ಅವರು ಅನಿರೀಕ್ಷಿತವಾಗಿ ಹಾಜರಾದ ನಂತರ, ನ್ಯಾಯಾಲಯವು ಅವರನ್ನು ಅಕ್ಟೋಬರ್ 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









