ಬಂಟ್ವಾಳ: ಹಿಂದೂಪರ ಸಂಘಟನೆಗಳ ಮುಖಂಡ ಹಾಗೂ ಪ್ರಸ್ತುತ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲಿನಲ್ಲಿರುವ ಭರತ್ ಕುಮ್ಡೆಲು ಅವರ ತಂದೆ, ಸೇಸಪ್ಪ ಬೆಳ್ಚಾಡ (75) ಅವರು ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಧ್ಯಾಹ್ನದ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ತಂದೆಯ ಅಂತ್ಯಕ್ರಿಯೆಗೆ ಪೊಲೀಸ್ ಬೆಂಗಾವಲಿನಲ್ಲಿ ಬಂದ ಮಗ
ಸೇಸಪ್ಪ ಬೆಳ್ಚಾಡ ಅವರ ಮಗನಾದ ಭರತ್ ಕುಮ್ಡೆಲು ಅವರು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಂದೆಯ ನಿಧನದ ಹಿನ್ನೆಲೆಯಲ್ಲಿ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭರತ್ ಕುಮ್ಡೆಲು ಅವರು ನ್ಯಾಯಾಲಯದಿಂದ ಅನುಮತಿ ಪಡೆದರು.
ನ್ಯಾಯಾಲಯವು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅನುಮತಿ ನೀಡಿತ್ತು. ಅದರಂತೆ, ಭರತ್ ಕುಮ್ಡೆಲು ಅವರು ಸಂಜೆ 5:20ರ ಸುಮಾರಿಗೆ ಬಿಗಿ ಪೊಲೀಸ್ ಭದ್ರತೆ ಮತ್ತು ಬೆಂಗಾವಲಿನಲ್ಲಿ ಮನೆಗೆ ಆಗಮಿಸಿದರು. ಬಳಿಕ ಅವರು ಬೆಂಜನಪದವು ಸ್ಮಶಾನದಲ್ಲಿ ನಡೆದ ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ರಾತ್ರಿ 8:45ರ ಸುಮಾರಿಗೆ ಅವರು ಪೊಲೀಸ್ ಬೆಂಗಾವಲಿನಲ್ಲಿ ಮತ್ತೆ ಜೈಲಿಗೆ ಮರಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









